ಬೆಂಗಳೂರು: ಯಾರು ಏನೇ ಅಂದರು ಬಿಡಿಎ ಮಾತ್ರ ಬದಲಾಗೋ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ಬಿಡಿಎ ನಿರ್ಮಾಣ ಮಾಡೋ ಸೈಟ್ ಹಾಗೂ ಫ್ಲ್ಯಾಟ್ ಗಳಿಗೆ ಜನರಿಂದ ಉತ್ತಮ ಬೇಡಿಕೆ ಇಲ್ಲದಿದ್ದರೂ ಮತ್ತೆ ಅದೇ ಯೋಜನೆಗೆ ಕೈ ಹಾಕಿದೆ. ಅದೂ ಕೂಡ ಒಂದೇ ಕಂಪನಿ ಟೆಂಡರ್ ನಲ್ಲಿ ಬರುವ ಹಾಗೆ ಹೊಸ ನಿಯಮವನ್ನೇ ಜಾರಿ ಮಾಡಿದ್ದಾರೆ.
ಬೆಂಗಳೂರು ಡೆವಲಪ್ ಮೆಂಟ್ ಅಥಾರಿಟಿ ನಿರ್ಮಾಣ ಮಾಡುವ ಫ್ಲ್ಯಾಟ್ ಗಳಿಗೆ ಬೇಡಿಕೆ ಇಲ್ಲದಿದ್ದರೂ ಬಿಡಿಎ ಮತ್ತೆ ಮತ್ತೆ ಪ್ಲ್ಯಾಟ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಅದರಲ್ಲೂ ರಾಮಲಿಂಗಮ್ ಚಂದ್ರಕಾಂತ್ ಕಂಪನಿಗೆ ಟೆಂಡರ್ ಕೊಡಲು ಉದ್ದೇಶಿಸಿರೋ ಬಿಡಿಎ, ಟೆಂಡರ್‍ನಲ್ಲಿ ಶೇರ್ ವಾಲ್ ಎಂಬ ನೂತನ ಟೆಕ್ನಾಲಜಿ ಅಳವಡಿಸಿಕೋಂಡಿರೋ ಕಂಪನಿಗಳು ಮಾತ್ರ ಭಾಗವಹಿಸಬೇಕು ಎಂದು ನಿಯಮ ಮಾಡಿದೆ.
Advertisement
Advertisement
ಈ ನಿಯಮ ಅಳವಡಿಸಿಕೊಂಡಿರೋ ಏಕೈಕ ಕಂಪನಿ ಎಂದರೆ ಚಂದ್ರಕಾಂತ್ ರಾಮಲಿಂಗಮ್ ಕಂಪನಿ ಮಾತ್ರ. ಹಾಗಾಗಿ 500 ಕೋಟಿಗು ಹೆಚ್ಚು ಮೊತ್ತದ ಈ ಟೆಂಡರ್ ನಲ್ಲಿ ರಾಮಲಿಂಗಮ್ ಕಂಪನಿ ಮಾತ್ರ ಭಾಗವಹಿಸಲು ಸಾಧ್ಯವಿದ್ದು, ಅದೇ ಕಂಪನಿಗೆ ಗುತ್ತಿಗೆ ನೀಡೋ ಉದ್ದೇಶದಿಂದಲೇ ಈ ನಿಯಮ ಹಾಕಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಜೊತೆಗೆ ಬೆಂಗಳೂರು ಅಭಿವೃದ್ಧಿ ಸಚಿವರಿಗೆ 15 ಪರ್ಸೆಂಟ್ ಕಮಿಷನ್ ಸಹ ಸೇರುತ್ತೆ ಎನ್ನುವ ಮಾತು ಕೇಳಿ ಬರುತ್ತಿದೆ.
Advertisement
ಒಟ್ಟಿನಲ್ಲಿ ಬಿಡಿಎ ಜನರ ಬೇಡಿಕೆ ಈಡೇರಿಸೋದು ಬಿಟ್ಟು ತಮ್ಮ ಹಿತಾಸಕ್ತಿಗಳನ್ನು ಈಡೇರಿಸಕೊಳ್ಳೋ ಸಲುವಾಗಿ ಈ ರೀತಿಯ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಲು ಮುಂದಾಗಿರೋದು ವಿಪರ್ಯಾಸವೇ ಸರಿ.