ಪ್ರಸಾದ್@49: ಪಾಕ್ ವಿರುದ್ಧದ ಬೆಂಗ್ಳೂರು ಪಂದ್ಯದ ವಿಡಿಯೋ ನೋಡಿ

Public TV
2 Min Read
cricket venkatesh prasad

ಬೆಂಗಳೂರು: ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಕರ್ನಾಟಕದ ಹೆಮ್ಮೆಯ ವೆಂಕಟೇಶ್ ಪ್ರಸಾದ್ ಇಂದು 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಭಾರತದ ಬಲಗೈ ಮಧ್ಯಮ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿರುವ ವೆಂಕಟೇಶ್ ಪ್ರಸಾದ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಸಿಸಿಐ ಪಾಕಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆದ ವಿಲ್ಸ್ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದ ವಿಡಿಯೋವನ್ನು ಅಪ್ಲೋಡ್ ಮಾಡಿ ಶುಭಾಶಯ ತಿಳಿಸಿದೆ.

ವಿಡಿಯೋದಲ್ಲಿ ಏನಿದೆ?
288 ರನ್‍ಗಳ ಗುರಿ ಪಡೆದ ಪಾಕಿಸ್ತಾನ 14.4 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 109 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ವೆಂಕಟೇಶ್ ಪ್ರಸಾದ್ ಎಸೆದ 14.5ನೇ ಓವರ್ ನ 5ನೇ ಎಸೆತವನ್ನು ನಾಯಕ ಅಮೀರ್ ಸೊಹೈಲ್ ಬೌಂಡರಿಗೆ ಅಟ್ಟಿದ್ದರು. ಈ ವೇಳೆ ಪ್ರಸಾದ್ ಅವರನ್ನು ನೋಡಿ ಸೊಹೈಲ್, ಬಾಲ್ ಅಲ್ಲಿ ಹೋಯ್ತು ಎಂದು ಬ್ಯಾಟ್ ಎತ್ತಿ ಕಿಚಾಯಿಸಿದ್ದಾರೆ. ಇದರಿಂದ ಸಿಟ್ಟಾದ ವೆಂಕಟೇಶ್ ಮರು ಎಸೆತದಲ್ಲಿ 55 ರನ್ ಗಳಿಸಿದ್ದ ಸೊಹೈಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ತನ್ನನ್ನು ಕೆಣಕಿದ್ದಕ್ಕೆ ಸೊಹೈಲ್ ಮುಖವನ್ನು ನೋಡಿ ಪ್ರಸಾದ್ ಸಂಭ್ರಮಿಸಿದ್ದರು. ಈ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ 3 ವಿಕೆಟ್ ಪಡೆದು ಮಿಂಚಿದ್ದರು.

1

ಈ ಪಂದ್ಯದಲ್ಲಿ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ್ದರೆ ಪಾಕಿಸ್ತಾನ 49 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು. ನಿಧಾನಗತಿಯ ಓವರ್ ಮಾಡಿದ್ದಕ್ಕೆ ಪಾಕಿಸ್ತಾನ ಬ್ಯಾಟಿಂಗ್ ವೇಳೆ 1 ಓವರ್ ಕಡಿತಗೊಳಿಸಲಾಗಿತ್ತು. ಭಾರತ ಕೊನೆಯ ನಾಲ್ಕು ಓವರ್ ಗಳಲ್ಲಿ 57 ರನ್ ಗಳಿಸಿದ್ದರೆ, ವಾಕರ್ ಯೂನಿಸ್ ಎಸೆದ ಓವರ್ ನಲ್ಲಿ 22 ರನ್ ಬಂದಿತ್ತು. 93 ರನ್ (115 ಎಸೆತ, 9 ಬೌಂಡರಿ) ಹೊಡೆದ ಸಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಡೇಜಾ 45 ರನ್(25 ಎಸೆತ, 4 ಬೌಂಡರಿ, 2 ಸಿಕ್ಸರ್) ಚಚ್ಚಿದ್ದರು.

ಭಾರತದ ಪರ 33 ಟೆಸ್ಟ್ ಪಂದ್ಯಗಳ 58 ಇನ್ನಿಂಗ್ಸ್ ನಲ್ಲಿ 96 ವಿಕೆಟ್ ಪಡೆದಿರುವ ವೆಂಕಟೇಶ್ ಪ್ರಸಾದ್ 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಪಡೆದಿದ್ದಾರೆ. 2005ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್‍ನಲ್ಲಿ ಆರ್ ಸಿಬಿ ತಂಡದ ಕೋಚ್ ಹಾಗೂ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *