ದುಬೈ: ಅಂತರಾಷ್ಟ್ರಿಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇಂಡಿಯನ್ ಪ್ರೀಮಿಯರ್ ಟೂರ್ನಿ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ್ದು, ಈ ಪ್ರಕ್ರಿಯೆಯಲ್ಲಿ ಐಸಿಸಿ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ.
ಐಪಿಎಲ್ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳು ಆಯೋಜಿಸುತ್ತಿರುವ ಟೂರ್ನಿಯಗಳ ಬಗ್ಗೆ ವಾಚ್ ಡಾಗ್ ಆಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದ್ದು, ಲೀಗ್‍ಗಳನ್ನು ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮ ರೂಪಿಸಿಸುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಆರಂಭವಾಗಿ ಭಾರೀ ಯಶಸ್ಸು ಗಳಿಸಿತ್ತು. ಇದರ ತರುವಾಯ ಹಲವು ಕ್ರಿಕೆಟ್ ಆಡುವ ದೇಶಗಳಲ್ಲೂ ಲೀಗ್ ನಡೆಸಲಾಯಿತು. ಇಂತಹ ಲೀಗ್‍ನಲ್ಲಿ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸುವ ಕಾರಣದಿಂದ ಐಸಿಸಿ ಆಯೋಜಿಸುವ ಪಂದ್ಯಗಳಿಗೆ ಆಟಗಾರರ ಅಲಭ್ಯತೆಯ ಸಮಸ್ಯೆ ಎದುರಾಗಿತ್ತು. ಸದ್ಯ ಐಸಿಸಿ ನಿರ್ಧಾರ ಬಿಸಿಸಿಐ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದ್ದು, ಇದು ದೇಶಿಯ ಕ್ರಿಕೆಟ್ ಟೂರ್ನಿ ಎಂದು ಹೇಳಿದೆ.
ಐಸಿಸಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ (ಸಿಒಒ) ಉಯಾಆನ್ ಹಿಗ್ಗಿನ್ಸ್ ಮತ್ತು ಮಾಧ್ಯಮ ಹಕ್ಕುಗಳ ಮುಖ್ಯಸ್ಥ ಆದಿ ಸಿಂಗ್ ದಾಬಾಸ್ ಐಸಿಸಿ ಸಮಿತಿಗೆ ಆಯ್ಕೆ ಆಗಿದ್ದಾರೆ. ಈ ಸಮಿತಿ ಪ್ರಮುಖವಾಗಿ ಕೆಲ ಪ್ರಸ್ತಾಪವನೆಗಳನ್ನು ಮುಂದಿಟ್ಟಿದ್ದು, ವಿಶ್ವದಲ್ಲಿ ನಡೆಯಲಿರುವ ಕ್ರಿಕೆಟ್ ಲೀಗ್ ಗಳ ಮೇಲೆ ಹೆಚ್ಚಿನ ನಿಯಂತ್ರಣ, ಅಲ್ಲದೇ ಲೀಗ್ ಆಯೋಜನೆ ಮಾಡಲು ಎಲ್ಲಾ ದೇಶಗಳಿಗೆ ಇಂದು ಒಂದೇ ರೀತಿಯ ನಿಯಮ ರೂಪಿಸುವುದು, ಆಟಗಾರರಿಗೆ ನಿಯಮಗಳ ರಚನೆ, ಕ್ರಿಕೆಟ್ ಆಡಳಿತ ಮಂಡಳಿಯಂತೆ ಟಿ22 ಲೀಗ್ ನಡೆಸುವ ಕುರಿತು ಮಂಡಳಿಯನ್ನು ರಚಿಸಬೇಕು ಎಂದು ಹೇಳಿದೆ.
ವರ್ಷದಿಂದ ವರ್ಷಕ್ಕೆ ಟಿ20 ಲೀಗ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಣಾಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ವಿಶ್ವಕಪ್ ಕ್ರಿಕೆಟ್‍ನಿಂದ ಪಾಕಿಸ್ತಾವನ್ನು ಹೊರಗಿಡುವ ಬೇಡಿಕೆ ನಡುವೆಯೂ ಐಸಿಸಿ ಮಹತ್ವದ ನಡೆಯನ್ನು ಇಟ್ಟಿದ್ದು, ಬಿಸಿಸಿಐ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv