T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

Public TV
1 Min Read
TEAM INDIA

ಮುಂಬೈ: ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ದಿನಗಣನೇ ಆರಂಭವಾಗಿದೆ. ಈ ನಡುವೆ ಟೀಂ ಇಂಡಿಯಾ ಟಿ20 ವಿಶ್ವಕಪ್‍ಗೆ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದು, ಇಂದು ನೂತನ ಜೆರ್ಸಿ ಅನಾವರಣಗೊಂಡಿದೆ.

ವಿಶ್ವಕಪ್‍ನಂತಹ ಮಹತ್ವದ ಟೂರ್ನಿಗಳಲ್ಲಿ ಭಾಗವಹಿಸುವ ಮುನ್ನ ನೂತನ ಜೆರ್ಸಿಯೊಂದಿಗೆ ಕಣಕ್ಕಿಳಿಯುವುದು ವಾಡಿಕೆ ಅದರಂತೆ ಈ ಬಾರಿಯೂ ಟೀ ಇಂಡಿಯಾ ನೂತನ ಜೆರ್ಸಿತೊಟ್ಟು ಮೈದಾನಕ್ಕೆ ಇಳಿಯಲಿದೆ. ಭಾರತ ತಂಡ ತೊಡುವ ನೂತನ ಜೆರ್ಸಿಯನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಸಿದ್ದು, ಕೋಟ್ಯಂತರ ಜನರ ಚೀಯರ್ಸ್‍ನಿಂದ ಪ್ರೇರಿತಗೊಂಡು ಸಿದ್ಧವಾದ ಜೆರ್ಸಿ ಎಂದು ಬರೆದುಕೊಂಡಿದೆ. ಜೆರ್ಸಿ ಕಡು ನೀಲಿ ಬಣ್ಣ ಮಿಶ್ರಿತವಾಗಿದ್ದು, ಈ ಹಿಂದಿನ ಜೆರ್ಸಿ ಶೈಲಿಯನ್ನು ಹಾಗೆ ಮುಂದುವರಿಸಿದಂತಿದೆ. ತಂಡದ ನೂತನ ಜೆರ್ಸಿ ಕಿಟ್‍ಗಳನ್ನು ಪ್ರಯೋಜಕತ್ವ ಹೊಂದಿರುವ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಸಿದ್ಧಪಡಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ – ಗೇಮ್‍ಪ್ಲೇ ಘೋಷಣೆ

ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ಆರಂಭಗೊಂಡು, ನವೆಂಬರ್ 14ರಂದು ಮುಕ್ತಾಯಗೊಳ್ಳಲಿದೆ. ಭಾರತ ತಂಡ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯಸಿದರೆ ಪಾಕ್‌ ಕ್ರಿಕೆಟ್‌ ಕತೆ ಮುಗಿದಂತೆ: ರಮೀಝ್‌ ರಾಜಾ

Share This Article
Leave a Comment

Leave a Reply

Your email address will not be published. Required fields are marked *