ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಭಾಗವಾಗಿ ಟೀಂ ಇಂಡಿಯಾ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ತಂಡದ ಕೋಚ್ ರವಿಶಾಸ್ತ್ರಿ ಹಾಗೂ ಟೀಂ ಇಂಡಿಯಾ ಮಾಜಿ ಆಟಗಾರ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೇಟಿಯಾಗಿದ್ದರು. ಈ ಇಬ್ಬರ ಫೋಟೋವನ್ನು ಟ್ವೀಟ್ ಮಾಡಿದ್ದ ಬಿಸಿಸಿಐ ಟ್ರೋಲಾಗಿದೆ.
ಇಬ್ಬರ ಫೋಟೋ ಟ್ವೀಟ್ ಮಾಡಿದ್ದ ಬಿಸಿಸಿಐ, ಇಬ್ಬರು ದಿಗ್ಗಜ ಆಟಗಾರರು ಭೇಟಿಯಾಗಿದ್ದರೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿತ್ತು. ಇದನ್ನು ಗಮನಿಸಿದ ಅಭಿಮಾನಿಗಳು ಬಿಸಿಸಿಐಯನ್ನು ಟ್ರೋಲ್ ಮಾಡಿದ್ದಾರೆ.
Advertisement
Only one hero my hero #TheWall #Legend #Dravid don’t compare him with anybody
— VINU S PILLAI (@vinu_bagavathi) September 20, 2019
Advertisement
ಇಬ್ಬರು ಆಟಗಾರರಿಗೂ ಯಾವ ಹೋಲಿಕೆ ಇದೆ? ದ್ರಾವಿಡ್ ಸರ್ ರೊಂದಿಗೆ ರವಿಶಾಸ್ತ್ರಿರನ್ನು ಹೋಲಿಕೆ ಮಾಡುವುದೇಕೆ? ದ್ರಾವಿಡ್‍ರನ್ನು ಯಾರೊಂದಿಗೂ ಹೋಲಿಕೆ ಮಾಡಬೇಡಿ. ನನ್ನ ಏಕೈಕ ಹೀರೋ ದ್ರಾವಿಡ್ ಒಬ್ಬರೇ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಇಬ್ಬರು ಬೇರೆ ಬೇರೆ ವ್ಯಕ್ತಿತ್ವವನ್ನು ಹೊಂದಿರುವುದು ಫೋಟೋದಲ್ಲೇ ಕಾಣಿಸುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಇಬ್ಬರ ಫೋಟೋವನ್ನು ಟ್ವೀಟ್ ಮಾಡಿದ ಬಿಸಿಸಿಐ ಟ್ರೋಲ್‍ಗೆ ಗುರಿಯಾಗಿದೆ. ಬಿಸಿಸಿಐ ಟ್ವೀಟ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement
— Ashish Dehariya (@dehariyashish) September 20, 2019
Advertisement
ಈ ಹಿಂದೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಲು ಬಿಸಿಸಿಐ ಸಲಹಾ ಸಮಿತಿಯಲ್ಲಿ ಸ್ಥಾನ ಪಡೆದಿದ್ದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಸಲಹೆ ನೀಡಿದ್ದರು. ಆದರೆ ಈ ಸಲಹೆಯನ್ನು ವಿರೋಧಿಸಿದ್ದ ರವಿಶಾಸ್ತ್ರಿ, ಸಂಜಯ್ ಬಂಗಾರ್ ಅವರನ್ನು ಕೋಚ್ ಸ್ಥಾನಕ್ಕೆ ನೇಮಕ ಮಾಡಲು ಪಟ್ಟು ಹಿಡಿದಿದ್ದರು. ಇದಕ್ಕೆ ಅಂದಿನ ಬಿಸಿಸಿಐ ಸಮಿತಿ ಮುಖ್ಯಸ್ಥರಾಗಿದ್ದ ವಿನೋದ್ ರಾಯ್ ಕೂಡ ಸಮ್ಮಿತಿ ಸೂಚಿಸಿದ್ದ ಪರಿಣಾಮ ದ್ರಾವಿಡ್ ಅವರಿಗೆ ಕೋಚ್ ಸ್ಥಾನ ತಪ್ಪಿತ್ತು.
Expectations vs Reality
— Sagar (@sagarcasm) September 20, 2019