ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾರನ್ನು ಎಲ್ಲಾ ಕ್ರಿಕೆಟ್ ಮಾದರಿ ಪಂದ್ಯಗಳಿಂದ 8 ತಿಂಗಳು ನಿಷೇಧ ಮಾಡಿ ಬಿಸಿಸಿಐ ಆದೇಶಿಸಿದೆ. ಡೋಪಿಂಗ್ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ್ದಾರೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ಈ ಆದೇಶ ನೀಡಿದೆ.
19 ವರ್ಷದ ಪೃಥ್ವಿ ಶಾ ಟೀಂ ಇಂಡಿಯಾ ಪರ 2018 ರಲ್ಲಿ 2 ಟೆಸ್ಟ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಸದ್ಯ ಅವರು ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು.
Advertisement
Advertisement
ಪೃಥ್ವಿ ಶಾರೊಂದಿಗೆ ಮತ್ತಿಬ್ಬರು ದೇಶಿಯ ಕ್ರಿಕೆಟ್ ಆಟಗಾರರಾದ ವಿದರ್ಭದ ಅಕ್ಷಯ್ ದುಲ್ಲರ್ ಮತ್ತು ರಾಜಸ್ಥಾನದ ದಿವ್ಯಾ ಗುಜರಾಜ್ ಅವರು ಕೂಡ ಬಿಸಿಸಿಐ ಕ್ರಿಕೆಟ್ ಮಂಡಳಿಯ ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ. ಸದ್ಯ ಶಾ 8 ತಿಂಗಳ ನಿಷೇಧಕ್ಕೆ ಒಳಗಾಗಿರುವುದರಿಂದ ಮಾರ್ಚ್ 16 ರಿಂದ ನವೆಂಬರ್ 15ರ ವರೆಗೂ ಅಮಾನತು ಎದುರಿಸಲಿದ್ದಾರೆ.
Advertisement
ಪೃಥ್ವಿ ಶಾ ಮುಂಬೈ ಕ್ರಿಕೆಟ್ ಅಸೋಸಿಯೆಷನ್ ಅಡಿ ನೋಂದಣಿಯಾಗಿದ್ದು, ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಶಾ ತನ್ನ ಅಜಾಗರೂಕತೆಯಿಂದ ನಿಷೇಧಿತ ವಸ್ತುವನ್ನು ಸೇವಿಸಿದ್ದಾನೆ. ಇದನ್ನು ಸಾಮಾನ್ಯ ಕೆಮ್ಮು ಸಿರಪ್‍ಗಳಲ್ಲಿ ಕಾಣವಹುದಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ಶಾ, ಬಿಸಿಸಿಐಗೆ ವಿವರಣೆ ನೀಡಿದ್ದಾರೆ.