ಬಿಸಿಸಿಐನಿಂದ ಅನಿಲ್ ಕುಂಬ್ಳೆಗೆ ಅವಮಾನ!

Public TV
2 Min Read
anil kumble

ಮುಂಬೈ: ಟೀಂ ಇಂಡಿಯಾದ ಮಾಜಿ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರಿಗೆ ಬಿಸಿಸಿಐ ಅವಮಾನ ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಿಲ್ ಕುಂಬ್ಳೆ ಇಂದು 47ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಬೆಳಗ್ಗೆ 10.56ಕ್ಕೆ ಟ್ವೀಟ್ ಮಾಡಿ ಶುಭಾಶಯ ಹೇಳಿತ್ತು.

ಈ ಶುಭಾಶಯ ಟ್ವೀಟ್ ನಲ್ಲಿ ಅನಿಲ್ ಕುಂಬ್ಳೆಯವರನ್ನು “ಮಾಜಿ ಟೀಂ ಇಂಡಿಯಾ ಬೌಲರ್” ಎಂದು ಸಂಬೋಧಿಸಲಾಗಿತ್ತು. ಮಾಜಿ ಬೌಲರ್ ಎಂದು ಸಂಬೋಧಿಸಿ ಟ್ವೀಟ್ ಆಗಿದ್ದೆ ತಡ ಜನ ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.

ಕೋಚ್ ಆಗಿ ಮುನ್ನಡೆಸಿದ್ದ ಕುಂಬ್ಳೆ ಅವರನ್ನು ಮಾಜಿ ಬೌಲರ್ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಅಭಿಮಾನಿಗಳು ಟ್ವೀಟ್ ಮಾಡಲು ಆರಂಭಿಸಿದರು. ಕೊನೆಗೆ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಬಿಸಿಸಿಐ ತನ್ನ ಹಳೇಯ ಟ್ವೀಟ್ ಡಿಲೀಟ್ ಮಾಡಿ 11.30ಕ್ಕೆ ಮತ್ತೊಂದು ಟ್ವೀಟ್ ಮೂಲಕ “ಟೀಂ ಇಂಡಿಯಾ ನಾಯಕ” ಅನಿಲ್ ಕುಂಬ್ಳೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿತು. ಅಷ್ಟೇ ಅಲ್ಲದೇ  ಹ್ಯಾಶ್ ಟ್ಯಾಗ್ ಬಳಸಿ ಗೌರವ ಸೂಚಿಸಿತು.

ಅಕ್ಟೋಬರ್ 17, 1970ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಕುಂಬ್ಳೆ 132 ಟೆಸ್ಟ್ ಪಂದ್ಯಗಳನ್ನು ಆಡಿದ್ದು 619 ವಿಕೆಟ್ ಪಡೆದಿದ್ದಾರೆ. 271 ಏಕದಿನ ಪಂದ್ಯಗಳನ್ನು ಆಡಿರುವ ಕುಂಬ್ಳೆ ಒಟ್ಟು 337 ವಿಕೆಟ್ ಪಡೆದಿದ್ದಾರೆ.

1990 ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡಿದ್ದರೆ, 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 1990ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಆಡಿದ ಕುಂಬ್ಳೆ, 2007ರಲ್ಲಿ ಬರ್ಮುಡಾ ವಿರುದ್ಧ ಕೊನೆಯ ಏಕದಿನ ಆಡಿದ್ದರು.

ಈ ವರ್ಷ ಇಂಗ್ಲೆಂಡಿನಲ್ಲಿ ನಡೆದ  ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋತಿತ್ತು. ಟೀಂ ಇಂಡಿಯಾ ಸೋತ ಬಳಿಕ ಡ್ರೆಸ್ಸಿಂಗ್ ರೂಂ ಅಸಮಾಧಾನದ ವಿಚಾರಗಳು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ  ಕುಂಬ್ಳೆ ಟೀಂ ಇಂಡಿಯಾಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

bcci tweet

https://youtu.be/upEMDhTPHy8

https://youtu.be/nFxZvI-PNrY

Share This Article
Leave a Comment

Leave a Reply

Your email address will not be published. Required fields are marked *