ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂದು ಕರೆಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ (ಆರ್‌ಟಿಐ) ತರಲು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಕುರಿತು ಬುಧವಾರ ಕಾನೂನು ಆಯೋಗ ತನ್ನ ವರದಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ. ತನ್ನ ವರದಿಯಲ್ಲಿ ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳು ಆರ್‌ಟಿಐ ಕಾಯ್ದೆ ಆಡಿ ಬರುತ್ತಿದ್ದು, ಬಿಸಿಸಿಐ ಇದರ ಅಡಿ ಬರಲು ಸಾಧ್ಯವಿಲ್ಲ ಯಾಕೆ ಎಂದು ಪ್ರಶ್ನಿಸಿದೆ? ಅಷ್ಟೇ ಅಲ್ಲದೇ ಕಾಯ್ದೆಯ 12 ವಿಧಿಯ ಪ್ರಕಾರ ಬಿಸಿಸಿಐ ಸಂಸ್ಥೆಯನ್ನು ತರಲು ಶಿಫಾರಸ್ಸು ಮಾಡಿದೆ.
Advertisement
Advertisement
ಬಿಸಿಸಿಐ ಒಂದು ಸ್ವತಂತ್ರ ಸಂಸ್ಥೆಯಾದರು ಸಹ ಆದರ ಅಡಿ ರಾಜ್ಯ ಸಂಸ್ಥೆಗಳನ್ನು ಒಳಗೊಂಡಂತೆ ಎಲ್ಲಾ ಸಂಸ್ಥೆಗಳು ಸಹ ಆರ್ ಟಿಐ ಕಾಯ್ದೆ ಅಡಿ ಬರಲು ತಿಳಿಸಿದೆ. ಒಂದು ವೇಳೆ ಕೇಂದ್ರ ಸರ್ಕಾರ ಕಾನೂನು ಆಯೋಗದ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಿದರೆ ಸಾಮಾನ್ಯ ವ್ಯಕ್ತಿಯು ಸಹ ಆರ್ ಟಿಐ ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ಬಿಸಿಸಿಐ ಸಂಸ್ಥೆ ಇತರೇ ಕ್ರಿಕೆಟ್ ಆಡುವ ರಾಷ್ಟ್ರಗಳು ಹಾಗೂ ಐಸಿಸಿ ಸಂಸ್ಥೆ ನಡುವೆ ಮಾಡಿಕೊಂಡಿರುವ ಒಪ್ಪಂದ ಕುರಿತು ಸಹ ಮಾಹಿತಿ ಪಡೆಯಬಹುದು.
Advertisement
2016ರ ಜುಲೈ ನಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಸಂಸ್ಥೆಯನ್ನು ಆರ್ ಟಿಐ ಕಾಯ್ದೆ ಅಡಿ ತರಲು ಇರುವ ಕಾನೂನು ಅಂಶಗಳ ಕುರಿತು ವರದಿ ಸಲ್ಲಿಸುವಂತೆ ಕಾನೂನು ಆಯೋಗಕ್ಕೆ ಸೂಚಿಸಿತ್ತು. ಇದರ ಹಿನ್ನೆಲೆ ಕಾನೂನು ಆಯೋಗ ವರದಿಯನ್ನು ಸಲ್ಲಿಸಿದೆ. ಮತ್ತೊಂದು ವಿಶ್ಲೇಷಣೆ ಪ್ರಕಾರ ಈ ಶಿಫಾರಸ್ಸಿನ ಅನ್ವಯ ಬಿಸಿಸಿಐ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಲು ಅವಕಾಶ ಲಭಿಸುತ್ತದೆ ಎನ್ನಲಾಗಿದೆ. ಈಗಾಗಲೇ ಪಾಕಿಸ್ತಾನ ಜೊತೆಗಿನ ಸರಣಿ ಆಯೋಜನೆ ವಿಚಾರದಲ್ಲಿ ಭಾರತ ವಿದೇಶಾಂಗ ನೀತಿಯೊಂದಿಗೆ ಬಿಸಿಸಿಐ ಅನುಮತಿ ಪಡೆಯವುದು ಕಡ್ಡಾಯವಾಗಿದೆ.
Advertisement
ಕಾನೂನು ಆಯೋಗ ತನ್ನ ಶಿಫಾರಸ್ಸಿಗೆ ಸಾಕಷ್ಟು ಪೂರಕ ಅಂಶಗಳನ್ನು ನೀಡಿದ್ದು. ಬಿಸಿಸಿಐ 1997 ರಿಂದ ತೆರಿಗೆ ಪಾವತಿಸುವಲ್ಲಿ ಸರ್ಕಾರದಿಂದ ರಿಯಾಯಿತಿ ಪಡೆದಿದೆ. ಅಲ್ಲದೇ ಆಟಗಾರರು ಭಾರತ ತ್ರಿವರ್ಣ ಹಾಗೂ ಆಶೋಕ ಚಕ್ರ ಚಿಹ್ನೆಯನ್ನು ಬಳಕೆ ಮಾಡುವುದನ್ನು ಉಲ್ಲೇಖಿಸಿದೆ.
ಕೇಂದ್ರ ಸರ್ಕಾರ ಈಗಾಗಲೇ ಬಿಸಿಸಿಐ ಸಂಸ್ಥೆಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಅಡಿ ಬರುವ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿತ್ತು. ಭಾರತ ಇತರೇ ಎಲ್ಲಾ ಕ್ರೀಡಾ ಸಂಸ್ಥೆಗಳು ರಾಷ್ಟ್ರೀಯ ಕ್ರೀಡಾ ಫೆಡರೇಷನ್(ಎನ್‍ಎಸ್‍ಎಫ್) ಅಡಿ ಕಾರ್ಯನಿರ್ವಹಿಸುತ್ತಿದೆ.