ಮುಂಬೈ: ಆಂಧ್ರಪ್ರದೇಶದ ವಿಜಯವಾಡದಲ್ಲಿ ನಿಗದಿಯಾಗಿದ್ದ ಚತುಷ್ಕೋನ ಕ್ರಿಕೆಟ್ ಟೂರ್ನಿಗೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಬಿಸಿಸಿಐ ತೀರ್ಮಾನಿಸಿದೆ.
ವಿಜಯವಾಡದ ಮೂಲಪಾಡು ಬಳಿ ನಡೆಯುತ್ತಿರುವ ಟೂರ್ನಿಯ ಮೊದಲ ಎರಡು ಪಂದ್ಯಗಳು ಕೆಟ್ಟ ಪಿಚ್ ಕಾರಣದಿಂದ ರದ್ದಾಗಿದೆ, 3ನೇ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸುವ ಮುನ್ಸೂಚನೆ ಇರುವುದರಿಂದ ಸದ್ಯ ಬಿಸಿಸಿಐ ಪಂದ್ಯವನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ತೀರ್ಮಾನಿಸಿದೆ.
Advertisement
Tireless effort by the ground staff #Vijaywada but due to persistent rain the match is abandoned @paytm #IndAvIndB #QuadrangularSeries @BCCIdomestic pic.twitter.com/RbFd3QVY7G
— Anjum Chopra (@chopraanjum) August 19, 2018
Advertisement
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ, ಅಗಸ್ಟ್ 19ರಂದು ನಡೆದ ಪಂದ್ಯದ ದಿನದಾಟಕ್ಕೂ ಮಳೆ ಅಡ್ಡಿಪಡಿಸಿರುವ ಕಾರಣ ತಂಡದ ಆಡಳಿತ ಮಂಡಳಿ ಹಾಗೂ ಪಂದ್ಯದ ಅಧಿಕಾರಿಗಳು ಸ್ಥಳ ಬದಲಾವಣೆಗೆ ಅನುಮತಿ ನೀಡಿದೆ. ಉಳಿದ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಚತುಷ್ಕೋನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಎ ಮತ್ತು ಬಿ ತಂಡ ಹಾಗೂ ದಕ್ಷಿಣ ಆಫ್ರಿಕಾ ಎ, ಆಸ್ಟ್ರೇಲಿಯಾ ಎ ತಂಡಗಳು ಭಾಗವಹಿಸಿದೆ. ಸದ್ಯ ಬಿಸಿಸಿಐ ನಿಗದಿ ಪಡಿಸಿರುವ ವೇಳಾಪಟ್ಟಿಯಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿಯ ಫೈನಲ್ ಪಂದ್ಯ ಸೇರಿದಂತೆ ಐದು ಪಂದ್ಯಗಳು ಆಗಸ್ಟ್ 23, 25 ಮತ್ತು 27 ಹಾಗೂ ಫೈನಲ್ ಪಂದ್ಯ ಆಗಸ್ಟ್ 29 ರಂದು ನಡೆಲಿದೆ. ಟೂರ್ನಿಯ ಕೆಲ ಪಂದ್ಯಗಳು ಹಾಸನದ ಆಲೂರಿನಲ್ಲಿ ನಡೆಯಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv