ಮುಂಬೈ: ವಿದೇಶಿ ಪ್ರವಾಸದ ವೇಳೆ ಆಟಗಾರರೊಂದಿಗೆ ಅವರ ಪತ್ನಿ ಕೂಡ ಬರಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದ ಕೊಹ್ಲಿ ಬೇಡಿಕೆಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ.
ಕಳೆದ 15 ದಿನಗಳ ಹಿಂದೆಯಷ್ಟೇ ವಿರಾಟ್ ಕೊಹ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಡಳಿತ ಮಂಡಳಿ ಮುಂದೆ ವಿದೇಶಿ ಪ್ರವಾಸಕ್ಕೆ ಪತ್ನಿಯರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಸದ್ಯ ಕೊಹ್ಲಿ ಮನವಿ ಪುರಸ್ಕರಿಸಿರುವ ಬಿಸಿಸಿಐ ಸರಣಿಯ ಆರಂಭದ 10 ದಿನಗಳನ್ನು ಹೊರತು ಪಡಿಸಿ ಮುಂದಿನ ಹಂತದಲ್ಲಿ ಪತಿಯನ್ನು ಸೇರಿಸಿಕೊಳ್ಳಲು ಅವಕಾಶ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಈ ಹಿಂದೆ ಇದ್ದ ನಿಯಮದಲ್ಲಿ ಸಡಿಲಿಕೆ ಮಾಡಿರುವ ಬಿಸಿಸಿಐ, ಪತ್ನಿಯರು ಆಟಗಾರರೊಂದಿಗೆ ಇರುವುದು ಉತ್ತಮ ಪರಿಣಾಮ ಬೀರುವ ಸಾಧ್ಯತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ. ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ, ರೋಹಿತ್ ಶರ್ಮಾ ರೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಂಡಿದೆ.
Advertisement
2015 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಆಟಗಾರರೊಂದಿಗೆ ಪತ್ನಿಯರು ವಿದೇಶಿ ಪ್ರವಾಸದಲ್ಲಿ ಜೊತೆಗಿರಲು ಅವಕಾಶ ನೀಡಿತ್ತು. ಆದರೆ ಬಳಿಕ ನಡೆದ ಆಶ್ಯಸ್ ಟೂರ್ನಿಯಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತ್ತು. ಈ ವೇಳೆ ಆಟಗಾರರ ಕಳಪೆ ಪ್ರದರ್ಶನಕ್ಕೆ ಈ ನಿಯಮ ಜಾರಿಯೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್, ಪತ್ನಿಯರು ತಮ್ಮೊಂದಿಗೆ ಸರಣಿಗೆ ಆಗಮಿಸಬೇಕೇ? ಬೇಡವೇ ಎನ್ನುವುದು ಆಟಗಾರರ ಆಯ್ಕೆಯಾಗುತ್ತದೆ. ಬಿಸಿಸಿಐ ಪತ್ನಿಯರು ಆಟಗಾರರೊಂದಿಗೆ ತೆರಳಲು ಅನುಮತಿ ನೀಡಬೇಕು ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv