ಇಸ್ಲಾಮಾಬಾದ್: ಆಗಸ್ಟ್ 30 ರಂದು ಆರಂಭವಾಗಲಿರುವ ಏಷ್ಯಾ ಕಪ್ (Asia Cup 2023) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಿಸಿಸಿಐ (BCCI) ಅಧ್ಯಕ್ಷ ರೋಜರ್ ಬಿನ್ನಿ ಪಾಕ್‍ಗೆ (Pakistan) ತೆರಳಲು ಸಿದ್ಧರಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಝಕಾ ಅಶ್ರಫ್ ಖಚಿತಪಡಿಸಿದ್ದಾರೆ.
ಪಾಕಿಸ್ಥಾನ ಹಾಗೂ ಶ್ರೀಲಂಕಾ ಉಸ್ತುವಾರಿ ಹೊತ್ತಿರುವ ಏಷ್ಯಾಕಪ್‍ನ ಹೆಚ್ಚಿನ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭದ್ರತಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹಿಂದೇಟು ಹಾಕಿತ್ತು. ಬಳಿಕ ಪಂದ್ಯಗಳ ಉದ್ಘಾಟನೆಗೆ ಪಿಸಿಬಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಆಹ್ವಾನ ನೀಡಿತ್ತು. ಈ ಪ್ರಸ್ತಾಪವನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಪಿಸಿಬಿ ತಿಳಿಸಿದೆ. ಅಲ್ಲದೇ ಪಾಕಿಸ್ತಾನಕ್ಕೆ ಏಷ್ಯಾ ಕಪ್ ಸಮಯದಲ್ಲಿ ಬರುವ ಪ್ರತಿಯೊಬ್ಬರನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: AsiaCup 2023, ವಿಶ್ವಕಪ್ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್ ಲುಕ್‌ನಲ್ಲಿ ಪಾಕ್ ತಂಡ
Advertisement
Advertisement
ಏಷ್ಯಾಕಪ್ ಮತ್ತು ಮುಂಬರುವ ವಿಶ್ವಕಪ್ ಎರಡರಲ್ಲೂ ನಮ್ಮ ತಂಡ ಯಶಸ್ವಿಯಾಗಿ ಹೊರಹೊಮ್ಮಲಿದೆ. ನಮ್ಮ ತಂಡವು ಪ್ರಸ್ತುತ ಒಗ್ಗಟ್ಟಾಗಿದೆ. ಅಲ್ಲದೆ ಉತ್ತಮ ಪ್ರದರ್ಶನ ನೀಡುತ್ತಿದೆ. ಇದರ ಪರಿಣಾಮವಾಗಿ ಏಕದಿನ ಪಂದ್ಯದಲ್ಲಿ ತಂಡದ ಶ್ರೇಯಾಂಕ ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ.
Advertisement
Advertisement
ತಂಡದ ಇತ್ತೀಚಿನ ಪ್ರದರ್ಶನಗಳನ್ನು ನೋಡಿದರೆ, ನಮ್ಮ ತಂಡವು ವಿಶ್ವಕಪ್‍ನಲ್ಲಿ ಯಶಸ್ವಿಯಾಗುತ್ತದೆ ಎಂಬ ಭರವಸೆ ಇದೆ. ಆದರೆ ಈ ಸಮಯದಲ್ಲಿ ಎಲ್ಲಾ ಗಮನವು ಏಷ್ಯಾ ಕಪ್ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಕ್ರಿಕೆಟಿಗರು ಮತ್ತು ಪ್ರತಿ ಪಂದ್ಯದ ಮೂಲಕ ಅವರ ಬೆಂಬಲಕ್ಕೆ ನಿಲ್ಲುವ ಅಭಿಮಾನಿಗಳ ನಡುವಿನ ನಿರಂತರ ಬಾಂಧವ್ಯಕ್ಕೆ ಸ್ಟಾರ್ ನೇಷನ್ ಜೆರ್ಸಿ ಸಾಕ್ಷಿಯಾಗಿದೆ. ಈ ಜೆರ್ಸಿಯು ನಮ್ಮ ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಮತ್ತು ಭವಿಷ್ಯವನ್ನು ಒಳಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: Asia Cup 2023 ಹೊಸ್ತಿಲಲ್ಲಿ ತರಬೇತಿ ಚುರುಕುಗೊಳಿಸಿದ ಟೀಂ ಇಂಡಿಯಾ
Web Stories