ನವದೆಹಲಿ: ಬಿಸಿಸಿಐ ಭಾರತ ತಂಡದ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ಯಶಸ್ವಿಯಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಟೆಸ್ಟ್ ಕ್ರಿಕೆಟ್‍ನ ಉಳಿವಿಗೆ ಇಂತಹ ಮತ್ತಷ್ಟು ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಮುಂಬೈ, ಗುಜರಾತ್ ನಲ್ಲಿ ಪಂದ್ಯಗಳನ್ನು ನಡೆಸಲು ಚಿಂತಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಗಂಗೂಲಿ, ಈಗಾಗಲೇ ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಬೇಕಾದ ತಯಾರಿಯನ್ನು ಆರಂಭಿಸಲಾಗಿದೆ. ಪಂದ್ಯ ವೀಕ್ಷಣೆ ಮಾಡಲು ಸಾಕಷ್ಟು ಅಭಿಮಾನಿಗಳನ್ನು ಸೆಳೆದಿದ್ದೇವೆ. ಕೋಲ್ಕತ್ತಾ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಪ್ರತಿ ನಿಮಿಷಕ್ಕೆ 15 ಟಿಕೆಟ್‍ಗಳನ್ನು ಮಾರಾಟ ಮಾಡಿದ್ದೆವು. ಕೇವಲ 2 ಗಂಟೆಯಲ್ಲೇ ಆನ್‍ಲೈನ್ ಟಿಕೆಟ್ ಮಾರಾಟವಾಗಿತ್ತು. ಆ ವೇಳೆ ಇಂತಹ ಮತ್ತಷ್ಟು ಪಂದ್ಯಗಳನ್ನು ಆಯೋಜಿಸುವ ಕುರಿತು ನಮಗೆ ಅರಿವಾಯಿತು ಎಂದು ಹೇಳಿದ್ದಾರೆ.
Advertisement
Advertisement
ತಂಡದ ಆಟಗಾರರು ಕೂಡ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡಲು ಸಮ್ಮತಿ ಸೂಚಿಸಿದ್ದಾರೆ. ಕೋಲ್ಕತ್ತಾ ಪಂದ್ಯದಲ್ಲಿ ಟೆಸ್ಟ್ ಪಂದ್ಯಕ್ಕೆ 60 ಸಾವಿರ ಮಂದಿ ಸಾಕ್ಷಿಯಾಗಿದ್ದರು. 2001ರಲ್ಲಿ ಆಸೀಸ್ ವಿರುದ್ಧ ಪಂದ್ಯದಲ್ಲಿ ನಾವು ಆಡಿದ್ದ ವೇಳೆ ಅಷ್ಟು ಮಂದಿ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು. ಆ ವೇಳೆ ಟಿ20 ಕ್ರಿಕೆಟ್ ಇರಲಿಲ್ಲ. ಅಲ್ಲದೇ ವರ್ಷಕ್ಕೆ ಒಂದು ಪಂದ್ಯವನ್ನು ಮಾತ್ರ ಕೋಲ್ಕತ್ತಾದಲ್ಲಿ ಆಡಲಾಗುತ್ತಿತ್ತು. ಆದರೆ ಈಗ ವರ್ಷವೊಂದರಲ್ಲಿ 9 ಐಪಿಎಲ್, ತಲಾ ಒಂದು ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
Advertisement
ಭವಿಷ್ಯದಲ್ಲಿ ಡೇ-ನೈಟ್ ಪಂದ್ಯಗಳನ್ನು ಬೆಂಗಳೂರು ಸೇರಿದಂತೆ ಮುಂಬೈ, ಗುಜರಾತ್ ನಲ್ಲಿ ಆಯೋಜಿಸುವ ತಯಾರಿ ನಡೆದಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆಟಗಾರರು ಇದಕ್ಕೆ ಪೂರಕವಾಗಿದ್ದಾರೆ ಎಂದು ಗಂಗೂಲಿ ತಿಳಿಸಿದ್ದಾರೆ.
Advertisement
Welcome to pink test ..@JayShah @bcci pic.twitter.com/lk9h9AX7Ox
— Sourav Ganguly (@SGanguly99) November 21, 2019