ನಿತ್ಯವೂ 10 ಸಾವಿರ ಜನರಿಗೆ ‘ದಾದಾ’ನಿಂದ ಅನ್ನದಾನ

Public TV
1 Min Read
Sourav Ganguly A

ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಲಾಗಿದ್ದು, ಅನೇಕರು ಹಸಿವಿನಿಂದ ಬಳತ್ತಿದ್ದಾರೆ. ಇದರಿಂದಾಗಿ ನಿತ್ಯವೂ 10 ಸಾವಿರ ಜನರಿಗೆ ಆಹಾರ ಒದಗಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದಾರೆ.

ಸೌರವ್ ಗಂಗೂಲಿ ಶನಿವಾರ ಇಸ್ಕಾನ್‍ನ ಕೋಲ್ಕತ್ತಾ ಕೇಂದ್ರಕ್ಕೆ ಸಹಾಯ ಹಸ್ತ ಚಾಚಿದ್ದು, ಪ್ರತಿದಿನ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ 20,000 ಜನರಿಗೆ ಆಹಾರವನ್ನು ನೀಡುವುದಾಗಿ ಹೇಳಿದ್ದಾರೆ. ಈವರೆಗೂ ಕೋಲ್ಕತಾ ಇಸ್ಕಾನ್ ಪ್ರತಿದಿನ 10,000 ಜನರಿಗೆ ಆಹಾರವನ್ನು ನೀಡುತ್ತಿತ್ತು. ಆದರೆ ಇನ್ನುಮುಂದೆ 20,000 ಜನರಿಗೆ ಆಹಾರ ಒದಗಿಲುವ ಕೆಲಸ ಮಾಡಲಿದೆ.

ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಧರಿಸಿ ಭಾರತದ ಮಾಜಿ ನಾಯಕ ಕೋಲ್ಕತ್ತಾದ ಇಸ್ಕಾನ್ ಕೇಂದ್ರಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕೋಲ್ಕತ್ತಾ ಇಸ್ಕಾನ್ ಕೇಂದ್ರದ ವಕ್ತಾರ, ಉಪಾಧ್ಯಕ್ಷ ರಾಧರಮನ್ ದಾಸ್, ‘ನಾವು ಪ್ರತಿದಿನ 10,000 ಜನರಿಗೆ ಆಹಾರವನ್ನು ಅಡುಗೆ ಮಾಡುತ್ತಿದ್ದೆವು. ನಮ್ಮ ಪ್ರೀತಿಯ ಸೌರವ್ ದಾದಾ ಮುಂದೆ ಬಂದು ಅವರ ಎಲ್ಲಾ ಬೆಂಬಲವನ್ನು ನೀಡಿದ್ದಾರೆ ಮತ್ತು ದೇಣಿಗೆ ನೀಡಿದ್ದಾರೆ. ಇದು ಪ್ರತಿದಿನ 20,000 ಜನರಿಗೆ ನಮ್ಮ ಸಾಮಥ್ರ್ಯವನ್ನು ದ್ವಿಗುಣಗೊಳಿಸಲು ಅನುವು ಮಾಡಿಕೊಟ್ಟಿದೆ’ ಎಂದು ತಿಳಿಸಿದ್ದಾರೆ.

Sourav Ganguly

‘ಕೊರೊನಾ ಬಿಕ್ಕಟ್ಟು ಮಾನವೀಯತೆಯ ಮುಂದೆ ಅಭೂತಪೂರ್ವ ಸವಾಲುಗಳನ್ನು ಸೃಷ್ಟಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ದಾದಾ ಅವರ ದೊಡ್ಡ ಅಭಿಮಾನಿ. ಮೈದಾನದಲ್ಲಿ ಅವರ ಅನೇಕ ಇನ್ನಿಂಗ್ಸ್ ಗಳನ್ನು ನೋಡಿದ್ದೇನೆ. ಆದರೆ ಪ್ರತಿದಿನ 10,000 ಜನರಿಗೆ ಆಹಾರವನ್ನು ನೀಡುವ ಅವರ ಇನ್ನಿಂಗ್ಸ್ ಅತ್ಯುತ್ತಮವಾದುದು. ಇಸ್ಕಾನ್ ಗಂಗೂಲಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ’ ಎಂದು ದಾಸ್ ಹೇಳಿದ್ದಾರೆ.

ಗಂಗೂಲಿ ಅವರು ಈ ಹಿಂದೆ ರಾಮಕೃಷ್ಣ ಮಿಷನ್‍ನ ಪ್ರಧಾನ ಕಚೇರಿಯಾದ ಬೇಲೂರು ಮಠದಲ್ಲಿ 20,000 ಕೆಜಿಗಳಷ್ಟು ಅಕ್ಕಿಯನ್ನು ದಾನ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *