ಮುಂಬೈ: ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡ್ವೇನ್ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ್ದಾರೆ. ಆದರೆ ಬಹುದಿನಗಳ ಬಳಿಕ 2014 ರ ಟೂರ್ನಿಯ ವೇಳೆ ಬಿಸಿಸಿಐ ತಮಗೆ ನೀಡಿದ್ದ ಸಹಕಾರದ ಕುರಿತು ನೆನಪಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮ ಸಂದರ್ಶನವೊಂದರ ವೇಳೆ ಮಾತನಾಡಿರುವ ಬ್ರಾವೋ, 2014 ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನೊಂದಿಗೆ ಆಟಗಾರರ ಒಪ್ಪಂದ ಮುರಿದು ಬಿದ್ದಿತ್ತು. ಈ ವೇಳೆ ಬೋರ್ಡ್ ಗೆ ಎಚ್ಚರಿಕೆ ಸಂದೇಶ ನೀಡಿ ಆಟಗಾರರ ಪರ ನಿಲ್ಲಲು ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದೆ. ಆದರೆ ಅಂದು ಮಧ್ಯಪ್ರವೇಶ ಮಾಡಿದ್ದ ಬಿಸಿಸಿಐ, ವಿಂಡೀಸ್ ಬೋರ್ಡ್ ಆಟಗಾರರಿಗೆ ನೀಡುವ ಹಣವನ್ನು ತಾನೇ ನೀಡಲು ಮುಂದಾಗಿತ್ತು. ಆದರೆ ಬಿಸಿಸಿಐ ನಮಗೆ ಹಣ ನೀಡಬೇಕಿಲ್ಲ. ಆಟಗಾರರ ಹಣ ನೀಡುವುದು ವಿಂಡೀಸ್ ಬೋರ್ಡ್ ಕರ್ತವ್ಯ ಎಂದು ಹೇಳಿ ಬಿಸಿಸಿಐ ಸಹಕಾರವನ್ನು ನಿರಾಕರಿಸಿದ್ದೆ ಎಂದು ಬ್ರಾವೋ ಹೇಳಿದ್ದಾರೆ.
Advertisement
Advertisement
ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್ ಶ್ರೀನಿವಾಸನ್ ಅವರು ನನಗೆ ಬೆಳಗ್ಗೆ 3 ಗಂಟೆ ಸಮಯದಲ್ಲಿ ಸಂದೇಶ ರವಾನಿಸಿದ್ದರು. ಆದರಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದರು. ಆದರೆ ನಾನು ಆಟಗಾರರ ಪರ ನಿಂತು ಸರಣಿಯಿಂದ ಹಿಂದೆ ಸರಿದೆ. ಅಂದು ಆಟಗಾರರ ಕಷ್ಟದ ಆರ್ಥೈಸಿಕೊಂಡಿದ್ದ ಬಿಸಿಸಿಐ ಗಟ್ಟಿ ನಿರ್ಧಾರ ಮಾಡಿತ್ತು. ಬಿಸಿಸಿಐ ಆಟಗಾರರಿಗೆ ಬೆಂಬಲವಾಗಿದ್ದು, ಇದರಿಂದಲೇ ನಾನು ನಿರಂತರ ಟೂರ್ನಿ ಇಲ್ಲದಿದ್ದರೂ ಕೂಡ ಆಟದಲ್ಲಿ ಮುಂದುವರೆಯಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
Advertisement
ಸಂದರ್ಶನದ ಕಾರ್ಯಕ್ರಮದ ವೇಳೆ ಬ್ರಾವೋ ತಮ್ಮ ಕ್ರಿಕೆಟ್ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಮೊದಲ ಪಂದ್ಯದಲ್ಲೇ ನಾವು ಬೋರ್ಡ್ ಗೆ ಖಚಿತ ಸಂದೇಶ ರವಾನಿಸಿದ್ದೇವು. ಆಗ ತಂಡದ ಒಬ್ಬ ಆಟಗಾರ ಬಿಟ್ಟು ಎಲ್ಲರೂ ಒಪ್ಪಿಗೆ ನೀಡಿ ಸಹಿ ಮಾಡಿದ್ದರು. ಆದರೆ ಎಚ್ಚರಿಕೆ ಬಳಿಕವೂ ನಮಗೆ ಯಾವುದೇ ಪ್ರಯೋಜನ ಆಗಲಿಲ್ಲ. ಅದ್ದರಿಂದ ಅನಿವಾರ್ಯವಾಗಿ 4ನೇ ಏಕದಿನ ಪಂದ್ಯಕ್ಕೂ ಮುನ್ನ ಸರಣಿಯಿಂದ ಹೊರ ನಡೆದವು ಎಂದು ವಿವರಿಸಿದ್ದಾರೆ.
Advertisement
ಬ್ರಾವೋ ನಾಯಕತ್ವ ತಂಡ ಸರಣಿಯಿಂದ ಹಿಂದೆ ಸರಿದ ಬಳಿಕ ಮತ್ತೆ ರಾಷ್ಟ್ರೀಯ ತಂಡದ ಪರ ಆಡಲು ಬ್ರಾವೋ ಅವಕಾಶ ಪಡೆದಿರಲಿಲ್ಲ. ಬಳಿಕ ಹಲವು ಫ್ರಾಂಚೈಸಿ ಟೂರ್ನಿಗಳಲ್ಲಿ ಆಡಿದ್ದ ಬ್ರಾವೋ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. 35 ವರ್ಷದ ಬ್ರಾವೋ ಕಳೆದ ಅಕ್ಟೋಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹಾಗೂ ಆಟಗಾರರ ನಡುವೆ ಹಲವು ಬಾರಿ ಇಂತಹ ಘಟನೆಗಳು ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews