ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ- ಅರ್ಹತೆಗಳೇನು?

Public TV
1 Min Read
BCCI

ನವದೆಹಲಿ: ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ವಿಸ್ತೃತ ಅಧಿಕಾರಾವಧಿಯು ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯ ಕೋಚ್ ಹುದ್ದೆಗೆ (Head Coach) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತೀಯ ಕ್ರಿಕೆಟ್ ಮಂಡಳಿಯು ಸೋಮವಾರ ರಾತ್ರಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತರು ಮೇ 27 ರಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಬಳಿಕ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ.

ಅಧಿಕಾರಾವಧಿ: ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್‌ನ ಅವಧಿಯು ಮೂರೂವರೆ ವರ್ಷಗಳಾಗಿರುತ್ತದೆ. ಅಂದರೆ 2024ರ ಜುಲೈ 1 ರಿಂದ 2027 ರ ಡಿಸೆಂಬರ್ 31 ರವರೆಗೆ ಇರುತ್ತದೆ. ಭಾರತ ಪುರುಷರ ಪ್ರದರ್ಶನ ಮತ್ತು ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯ ಕೋಚ್ ಹೊಂದಿರುತ್ತಾರೆ. ಇದನ್ನೂ ಓದಿ: ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

ಅರ್ಹತೆ:
* ಕನಿಷ್ಠ 30 ಟೆಸ್ಟ್ ಪಂದ್ಯಗಳನ್ನು ಅಥವಾ 50 ODI ಗಳನ್ನು ಆಡಿರಬೇಕು.
* ಕನಿಷ್ಠ ಎರಡು ವರ್ಷಗಳ ಅವಧಿಯವರೆಗೆ ಟೆಸ್ಟ್ ಆಡುವ ರಾಷ್ಟ್ರದ (ಐಸಿಸಿ ಪೂರ್ಣ-ಸದಸ್ಯ) ಹಿಂದಿನ ಮುಖ್ಯ ಕೋಚ್ ಆಗಿರಬೇಕು.
* ಅಸೋಸಿಯೇಟ್ ಸದಸ್ಯ/ಐಪಿಎಲ್ ತಂಡ ಅಥವಾ ತತ್ಸಮಾನ ಅಂತರಾಷ್ಟ್ರೀಯ ಲೀಗ್/ಪ್ರಥಮ ದರ್ಜೆ ತಂಡಗಳ ಮುಖ್ಯ ತರಬೇತುದಾರ/ರಾಷ್ಟ್ರೀಯ A ತಂಡಗಳು, ಕನಿಷ್ಠ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಮುಖ್ಯ ಕೋಚ್ ಆಗಿರಬೇಕು.
*‌ BCCI ಲೆವೆಲ್ 3 ಪ್ರಮಾಣೀಕರಣವನ್ನು ಹೊಂದಿರಬೇಕು.
* 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

RAHUL DRAVID

ಸದ್ಯ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಇದೇ ಜೂನ್‌ಗೆ ಅಂತ್ಯವಾಗಲಿದೆ. 2024ರ T20 ವಿಶ್ವಕಪ್ ಮಗಿದ ಬಳಿಕ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಸೇವೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಅರ್ಜಿ ಆಹ್ವಾನಿಸಲಾಗಿದೆ.

Share This Article