– ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶಕ್ಕೆ ಬಿಸಿಸಿಐಗೆ ಮನವಿ
ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ, ಬಿಸಿಸಿಐ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಪ್ರಕಟಿಸಿಲ್ಲ. ಆದಾಗ್ಯೂ, ಈಗಾಗಲೇ ಉಳಿಸಿಕೊಳ್ಳುವ (IPL Retentions) ಆಟಗಾರರ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಜುಲೈ ತಿಂಗಳ ಕೊನೆಯಲ್ಲೇ ಫ್ರಾಂಚೈಸಿ ಮಾಲೀಕರ ಸಭೆಯಲ್ಲಿ ಈ ವಿಷಯದ ಬಗ್ಗೆ ಬಿಸಿಸಿಐ (BCCI) ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭೀಕರ ಚಂಡಮಾರುತ – ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟ ಟೀಂ ಇಂಡಿಯಾ!
Advertisement
ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು (IPL Franchises) ಮುಂದಿನ 3 ಋತುಗಳಿಗೆ ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆ ಹೆಚ್ಚಿಸುವಂತೆ ಬಿಸಿಸಿಐಗೆ ವಿನಂತಿಸಿವೆ. ಮುಂಬರುವ ಐಪಿಎಲ್ಗೆ ಮೆಗಾ ಹರಾಜು ನಡೆಯಲಿದ್ದು, ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. 2022ರ ಮೆಗಾ ಹರಾಜಿನಲ್ಲಿ 8 ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಕ್ಯಾಪ್ಡ್ ಅಥವಾ ಅನ್ಕ್ಯಾಪ್ಡ್ ಸೇರಿದಂತೆ ಗರಿಷ್ಠ 3 ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡಲಾಗಿತ್ತು. ಎರಡಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳದಂತೆ ಷರತ್ತು ವಿಧಿಸಲಾಗಿತ್ತು. ಏಕೆಂದರೆ ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳ ಸೇರ್ಪಡೆಯಿಂದಾಗಿ ಬಿಸಿಸಿಐ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆ ಕಡಿಮೆ ಮಾಡಿತ್ತು. ಹರಾಜಿನ ಸಮಯದಲ್ಲಿ ರೈಟ್ ಟು ಮ್ಯಾಚ್ (RTM) ಕಾರ್ಡ್ಗಳ ಬಳಕೆಯ ಮೂಲಕ 5 ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಫ್ರಾಂಚೈಸಿಗಳು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
Advertisement
Advertisement
ಫ್ರಾಂಚೈಸಿಗಳ ಮನವಿ ಏನು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮೂವರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನ ಉಳಿಸಿಕೊಳ್ಳಲು ಷರತ್ತು ವಿಧಿಸಿದೆ. ಆದ್ರೆ ಹೆಚ್ಚಿನ ಫ್ರಾಂಚೈಸಿಗಳು 5 ರಿಂದ 7 ಆಟಗಾರರು, ಕೆಲವರು 8 ಆಟಗಾರರನ್ನು ಉಳಿಸಿಕೊಳ್ಳಲು ವಿನಂತಿ ಮಾಡಿವೆ. ಅದೇ ಸಮಯದಲ್ಲಿ, ಕೆಲ ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮವೇ ಇರಬಾರದೆಂದು. ಕೆಲ ಫ್ರಾಂಚೈಸಿಗಳು ಆರ್ಟಿಎಂ ಕಾರ್ಡ್ ಮಾತ್ರ ಹೊಂದಲು ವಿನಂತಿಸಿರುವುದಾಗಿ ಮೂಲಗಳು ತಿಳಿಸಿವೆ. ಫ್ರಾಂಚೈಸಿ ಮಾಲೀಕರೊಂದಿಗೆ ಮಾತನಾಡಿದ ಬಳಿಕ ಅಂತಿಮ ನಿರ್ಧಾರ ಬಿಸಿಸಿಐ ಪ್ರಕಟಿಸಲಿದೆ. ಜೊತೆಗೆ ಪ್ರಮುಖ ಆಟಗಾರರ ಆಕ್ಷೇಪದ ಹೊರತಾಗಿಯೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಉಳಿಸಿಕೊಳ್ಳಲು ಮುಂದಾಗಿದೆ ಎಂದೂ ತಿಳಿದುಬಂದಿದೆ. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು
Advertisement
ಮೌಲ್ಯದ ಮಿತಿ ಹೆಚ್ಚಳಕ್ಕೆ ಮನವಿ:
ಇನ್ನೂ ಪ್ರತಿ ಫ್ರಾಂಚೈಸಿಗೂ ಐಪಿಎಲ್‌ನಲ್ಲಿ 100 ಕೋಟಿ ರೂ. ಮಿತಿ ನಿಗದಿಪಡಿಸಲಾಗಿದೆ. ಇದರ ಮಿತಿಯನ್ನು 20 ಕೋಟಿ ರೂ. ಹೆಚ್ಚಿಸುವಂತೆ ಫ್ರಾಂಚೈಸಿಗಳು ಮನವಿ ಮಾಡಿದ್ದು, ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಐಪಿಎಲ್ ಮಂಡಳಿ ಸಿಇಒ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್, ರಾಣಾ, ಜಿತೇಶ್ ಆಯ್ಕೆ!