ಮುಂಬೈ: ಟೀಂ ಇಂಡಿಯಾದ (Team India) ಕೋಚ್ ಹುದ್ದೆಗೆ ನಾನು ಯಾವುದೇ ಆಸ್ಟ್ರೇಲಿಯಾ (Australia) ಆಟಗಾರರನ್ನು ಸಂಪರ್ಕಿಸಿಲ್ಲ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ಶಾ (Jay Shah) ಹೇಳಿದ್ದಾರೆ.
ಕೋಚ್ ಹುದ್ದೆಗೆ ನಾನು ಅಥವಾ ಬಿಸಿಸಿಐ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಿಗೆ ಯಾವುದೇ ಆಫರ್ ನೀಡಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ. ಭಾರತೀಯ ಕ್ರಿಕೆಟ್ (Indian Cricket) ರಚನೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ಮತ್ತು ಶ್ರೇಯಾಂಕಗಳ ಮೂಲಕ ಏರಿದ ವ್ಯಕ್ತಿಗಳನ್ನು ಆಯ್ಕೆ ಮಾಡಲು ನಾವು ಗಮನಹರಿಸಿದ್ದೇವೆ. ಟೀಮ್ ಇಂಡಿಯಾವನ್ನು ಮುಂದಿನ ಹಂತಕ್ಕೆ ಏರಿಸಲು ನಮ್ಮ ದೇಶೀಯ ಕ್ರಿಕೆಟ್ ಚೌಕಟ್ಟಿನ ಬಗ್ಗೆ ನಮ್ಮ ಕೋಚ್ ಆಳವಾದ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ಫ್ಲೆಮಿಂಗ್ ಟೀಂ ಇಂಡಿಯಾ ಕೋಚ್ ಆಗ್ತಾರಾ? – ಧೋನಿ ಸಹಾಯ ಕೇಳಿದ ಬಿಸಿಸಿಐ
Advertisement
ನವೆಂಬರ್ 2021 ರಿಂದ ದ್ರಾವಿಡ್ (Rahul Dravid) ಕೋಚ್ ಹುದ್ದೆಯನ್ನು ಅಲಂಕರಿಸಿದ್ದು ಜೂನ್‌ನಲ್ಲಿ ಅವಧಿ ಅಂತ್ಯವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಈ ಕಾರಣಕ್ಕೆ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 27 ರಂದು ಸಂಜೆ 6 ಗಂಟೆಯ ಒಳಗಡೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದು ಬಿಸಿಸಿಐ ಜಾಹೀರಾತು ಪ್ರಕಟಿಸಿದೆ.
Advertisement
Advertisement
2 ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ (Ricky Ponting) ಅವರನ್ನು ಕೋಚ್ ಹುದ್ದೆಗೆ ಸಂಪರ್ಕಿಸಿದೆ ಎಂದು ವರದಿಯಾಗಿತ್ತು. ಟಿ20 ವಿಶ್ವಕಪ್‌ಗಾಗಿ ಬಹುತೇಕ ಭಾರತೀಯ ಕ್ರಿಕೆಟಿಗರು ಮೇ 25 ರಂದು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಐಪಿಎಲ್ (IPL) ಫೈನಲ್‌ನಲ್ಲಿ ಭಾಗವಹಿಸುವವರು ಮೇ 27 ರಂದು ವಿಮಾನ ಹತ್ತಲಿದ್ದಾರೆ.