ಮುಂಬೈ: ಟೀಂ ಇಂಡಿಯಾದ ನಿಗದಿತ ಓವರ್‌ಗಳ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ರೋಹಿತ್ ಶರ್ಮಾರಿಗೆ ನಾಯಕತ್ವ ಹೊರಿಸಿದೆ. ನಾಯಕತ್ವದ ಜೊತೆಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ಬಿಸಿಸಿಐ ರೋಹಿತ್‍ಗೆ ನೀಡಿದೆ.
Advertisement
ಟೀಂ ಇಂಡಿಯಾದ ಮೂರು ಮಾದರಿ ಕ್ರಿಕೆಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ನಿರ್ವಾಹಿಸುತ್ತಿದ್ದರು ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವವನ್ನು ವಿರಾಟ್ ತ್ಯಜಿಸಿದ್ದರು. ಬಳಿಕ ಇದೀಗ ಬಿಸಿಸಿಐ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ ಟೆಸ್ಟ್ ತಂಡದ ನಾಯಕತ್ವದಲ್ಲಿ ಮಾತ್ರ ಮುಂದುವರಿಸಿದೆ. ಅಲ್ಲದೇ ಟಿ20 ಮತ್ತು ಏಕದಿನ ತಂಡದ ನಾಯಕರನ್ನಾಗಿ ರೋಹಿತ್ ಶರ್ಮಾರನ್ನು ನೇಮಿಸಿದೆ. ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸುವ ಜೊತೆಗೆ ಒಂದು ಟಾಸ್ಕ್ ಕೂಡ ಬಿಸಿಸಿಐ ರೋಹಿತ್‍ಗೆ ನೀಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ
Advertisement
Advertisement
ರೋಹಿತ್ ಶರ್ಮಾ ಏಕದಿನ ತಂಡದ ನಾಯಕತ್ವದ ಜೊತೆಗೆ ಭವಿಷ್ಯದ ಟೀಂ ಇಂಡಿಯಾ ನಾಯಕನನ್ನು ಬೆಳೆಸುವ ಜವಾಬ್ದಾರಿ ಕೂಡ ನೀಡಲಾಗಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾರಿಗೆ ಇದೀಗ 34 ವರ್ಷ ವಯಸ್ಸು ಇವರ ಬಳಿಕ ತಂಡದ ನಾಯಕತ್ವವನ್ನು ನಿರ್ವಹಿಸಲು ಸಮರ್ಥ ಆಟಗಾರನನ್ನು ಈಗಿನಿಂದಲೇ ಬೆಳೆಸಬೇಕೆಂದು ಬಿಸಿಸಿಐ ರೋಹಿತ್‍ಗೆ ಸೂಚಿಸಿದೆ. ಮುಂದಿನ ನಾಯಕರ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ. ಇದನ್ನೂ ಓದಿ: ರೋಹಿತ್ ಟೀಂ ಇಂಡಿಯಾದ ನಾಯಕರಾದ ಬಳಿಕ ಸಿಗುತ್ತಿರುವ ವೇತನ ಎಷ್ಟು ಗೊತ್ತಾ?
Advertisement
ಕೆ.ಎಲ್ ರಾಹುಲ್‍ಗೆ ಇದೀಗ 29 ವರ್ಷ ವಯಸ್ಸು ಇವರೊಂದಿಗೆ ಇವರಿಗಿಂತ ಕಡಿಮೆ ವಯಸ್ಸಿನ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಬಗ್ಗೆ ಬಿಸಿಸಿಐ ಹೆಚ್ಚಿನ ಒಲವು ಹೊಂದಿದ್ದು ಇವರನ್ನು ಮುಂದಿನ ನಾಯಕರನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ರೋಹಿತ್‍ಗೆ ಬಿಸಿಸಿಐ ಹೊರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ನಾಯಕತ್ವದಿಂದ ಕೆಳಗಿಳಿಸಿ ಕೊಹ್ಲಿಗೆ ಧನ್ಯವಾದ ತಿಳಿಸಿದ ಬಿಸಿಸಿಐ
ಈ ಹಿಂದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದಲ್ಲಿ ನಾಯಕನಾಗಿ ಇರುವಾಗಲೇ ತಮಗೆ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿಯನ್ನು ಬೆಳೆಸಿದ್ದರು. ಇದೀಗ ರೋಹಿತ್ ಕೂಡ ಮಾಹಿಯಂತೆ ಇನ್ನೋರ್ವ ನಾಯಕನನ್ನು ಬೆಳೆಸುವ ಮಹತ್ವದ ಹೊಣೆಹೊತ್ತಿದ್ದಾರೆ. ಇದನ್ನು ಯಾವರೀತಿ ನಿರ್ವಹಿಸುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.