ಮುಂಬೈ: ವಿಶ್ವಕಪ್ ಬಳಿಕವೂ ರಾಹುಲ್ ದ್ರಾವಿಡ್ (Rahul Dravid) ಅವರು ಟೀಂ ಇಂಡಿಯಾದ (Team India) ಕೋಚ್ ಆಗಿ ಮುಂದುವರಿಯಲಿದ್ದಾರೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ (ICC World Cup Cricket) ಅಂತ್ಯಗೊಂಡ ದಿನವೇ ರಾಹುಲ್ ದ್ರಾವಿಡ್ ಅವರ ಕೋಚ್ (Coach) ಅವಧಿ ಕೊನೆಯಾಗಿತ್ತು. ಹೀಗಾಗಿ ದ್ರಾವಿಡ್ ಕೋಚ್ ಆಗಿ ಮುಂದುವರಿಯುತ್ತಾರಾ? ಇಲ್ಲವೋ ಎಂಬ ಪ್ರಶ್ನೆ ಎದ್ದಿತ್ತು.
Advertisement
ಈಗ ಬಿಸಿಸಿಐ ದ್ರಾವಿಡ್ ಅವರ ಕೋಚ್ ಅವಧಿಯನ್ನು ವಿಸ್ತರಿಸುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿದ ಬಿಸಿಸಿಐ, ಭಾರತೀಯ ತಂಡವನ್ನು ರೂಪಿಸುವಲ್ಲಿ ದ್ರಾವಿಡ್ ಅವರ ಪ್ರಮುಖ ಪಾತ್ರವನ್ನು ಮಂಡಳಿಯು ಅಂಗೀಕರಿಸುತ್ತದೆ ಮತ್ತು ಅವರ ಅಸಾಧಾರಣ ವೃತ್ತಿಪರತೆಯನ್ನು ಶ್ಲಾಘಿಸುತ್ತದೆ. ಇದರ ಜೊತೆ ಎನ್‌ಸಿಎ ಮುಖ್ಯಸ್ಥ ಮತ್ತು ಸ್ಟ್ಯಾಂಡ್-ಇನ್ ಮುಖ್ಯ ತರಬೇತುದಾರರಾಗಿ ವಿವಿಎಸ್ ಲಕ್ಷ್ಮಣ್ ಅವರ ಪಾತ್ರಗಳಿಗಾಗಿ ಮಂಡಳಿಯು ಪ್ರಶಂಸಿಸುತ್ತದೆ ಎಂದು ತಿಳಿಸಿದೆ.
Advertisement
Advertisement
ವಿಶ್ವಕಪ್ ಕ್ರಿಕೆಟ್ ಮುಕ್ತಾಯವಾದ ಬಳಿಕ ಬಿಸಿಸಿಐ (BCCI) ರಾಹುಲ್ ದ್ರಾವಿಡ್ ಅವರ ಜೊತೆ ಕೋಚ್ ಆಗಿ ಮುಂದುವರಿಸುವ ಬಗ್ಗೆ ಮಾತುಕತೆ ನಡೆಸಿತ್ತು. ಈ ಮಾತುಕತೆ ಫಲಪ್ರದವಾಗಿದ್ದು ರಾಹುಲ್ ಕೋಚ್ ಆಗಿ ಮುಂದುವರಿಯ ಬಗ್ಗೆ ಒಪ್ಪಿಗೆ ನೀಡಿದ್ದಾರೆ. ರಾಹುಲ್ ದ್ರಾವಿಡ್ ಎಷ್ಟು ಅವಧಿಯವರೆಗೆ ಕೋಚ್ ಆಗಿ ಮುಂದುವರಿಯುತ್ತಾರೆ ಎಂಬುದರ ಬಗ್ಗೆ ಬಿಸಿಸಿಐ ತಿಳಿಸಿಲ್ಲ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದೊಂದಿಗಿನ ಕಳೆದ ಎರಡು ವರ್ಷಗಳು ಸಂಪೂರ್ಣವಾಗಿ ಸ್ಮರಣೀಯವಾಗಿವೆ. ನಾವು ಏರಿಳಿತಗಳನ್ನು ಕಂಡಿದ್ದೇವೆ. ನಮ್ಮ ತಂಡದ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಕೌಶಲ್ಯ ಮತ್ತು ಮತ್ತು ಪ್ರತಿಭೆಯನ್ನು ಹೊಂದಿರುವ ಅಸಧಾರಣ ತಂಡ ನಮ್ಮದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊನೆ ಓವರ್‌ನಲ್ಲಿ 21 ರನ್ ಚೇಸ್; ದಾಖಲೆ ಬರೆದ ಆಸೀಸ್
ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ ಪ್ರತಿಕ್ರಿಯಿಸಿ, ಕೋಚ್ ನೇಮಕದ ಸಮಯದಲ್ಲಿ ರಾಹುಲ್ ದ್ರಾವಿಡ್‌ಗಿಂತ ಉತ್ತಮ ವ್ಯಕ್ತಿ ಇಲ್ಲ ಎಂದು ನಾನು ಹೇಳಿದ್ದೆ. ಟೀಂ ಇಂಡಿಯಾ ಮೂರು ಮಾದರಿಯ ಕ್ರಿಕೆಟ್ ಉನ್ನತ ಶ್ರೇಯಾಂಕ ಪಡೆದಿದ್ದು ಇದು ದ್ರಾವಿಡ್ ಅವರು ತಂಡಕ್ಕಾಗಿ ಮಾಡಿದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಫೈನಲ್‌ಗೆ ಮುನ್ನ ಸತತ 10 ಪಂದ್ಯಗಳನ್ನು ಗೆದ್ದಿರುವ ನಮ್ಮ ವಿಶ್ವಕಪ್ ಅಭಿಯಾನವು ಅಸಾಮಾನ್ಯವಾಗಿದೆ. ಉತ್ತಮ ಪ್ರದರ್ಶನ ನೀಡುವ ತಂಡವನ್ನಾಗಿ ರೂಪಿಸಿದ್ದಕ್ಕೆ ಮುಖ್ಯ ಕೋಚ್ ಮೆಚ್ಚುಗೆಗೆ ಅರ್ಹರು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಯಶಸ್ಸಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನಾವು ಅವರಿಗೆ ಒದಗಿಸುತ್ತೇವೆ ಎಂದಿದ್ದಾರೆ.
ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ಬಳಿಕ ಸುದ್ದಿಗೋಷ್ಠಿಗೆ ರಾಹುಲ್ ದ್ರಾವಿಡ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಾನಿನ್ನೂ ಯಾವುದೇ ರೀತಿಯ ಯೋಚನೆಗಳನ್ನು ಮಾಡಿಲ್ಲ. ಯಾಕಂದರೆ ನನ್ನ ಸಂಪೂರ್ಣ ಗಮನ ಈ ಬಾರಿಯ ಸರಣಿ ಮತ್ತು ಪಂದ್ಯದ ಮೇಲಿತ್ತು. ಭವಿಷ್ಯದ ಬಗ್ಗೆ ಯೋಚನೆ ಮಾಡಲು ಕೂಡ ಸಮಯವಿರಲಿಲ್ಲ. ಹೀಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಒಂದಿಷ್ಟು ಸಮಯ ಬೇಕಾಗಿದೆ ಎಂದು ತಿಳಿಸಿದ್ದರು.