ಮುಂಬೈ: 2019ರ ಅವಧಿಯಲ್ಲಿ ಹೊಸದಾಗಿ ಆಟಗಾರರ ವೇತನ ಶ್ರೇಣಿಯನ್ನು ನಿಗಧಿಪಡಿಸಿ ಬಿಸಿಸಿಐ ಬಿಡುಗಡೆ ಮಾಡಿದ್ದು, ಯುವ ಆಟಗಾರರ ರಿಷಬ್ ಪಂತ್‍ಗೆ ಎ ದರ್ಜೆಯ ಸ್ಥಾನ ನೀಡಲಾಗಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನವನ್ನು ಕಡಿಮೆ ಗೊಳಿಸಿ ಎ ಪ್ಲಸ್ ದರ್ಜೆಯಿಂದ ಎ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
Advertisement
Advertisement
21 ವರ್ಷದ ರಿಷಬ್ ಪಂತ್ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾದರು, ಪರಿಣಾಮ ಅವರಿಗೆ ಬಂಪರ್ ಅವಕಾಶ ಲಭಿಸಿದೆ. ಆದರೆ ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಧವನ್ ಹಾಗೂ ಟೆಸ್ಟ್ ಕ್ರಿಕೆಟ್‍ನಲ್ಲಿ ಭುವನೇಶ್ವರ್ ಹೆಚ್ಚು ಅವಕಾಶ ಪಡೆಯದ ಕಾರಣ ಅವರನ್ನು ಎ ದರ್ಜೆಯಲ್ಲಿ ಸ್ಥಾನದಲ್ಲಿರಸಲಾಗಿದೆ.
Advertisement
ಕಳೆದ ವರ್ಷ ಹೊಸದಾಗಿ ಪರಿಚಯಿಸಲಾಗಿದ್ದ ವಾರ್ಷಿಕ 7 ಕೋಟಿ ರೂ. ಮೊತ್ತದ ಒಪ್ಪಂದದಲ್ಲಿ ನಾಯಕ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮುಂದುವರಿದ್ದಾರೆ. ಈ ಹೊಸ ಒಪ್ಪಂದ ಅಕ್ಟೋಬರ್ 1, 2018 ರಿಂದ ಸೆಪ್ಟೆಂಬರ್ 30, 2019ರವರೆಗೂ ಮುಂದುವರಿಯಲಿದೆ. ಇನ್ನು ಕನ್ನಡಿಗ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ವಾರ್ಷಿಕ 3 ಕೋಟಿ ರೂ ಮೊತ್ತದ ಬಿ ಶ್ರೇಣಿಯಲ್ಲಿದ್ದಾರೆ. ಉಳಿದಂತೆ ಪಟ್ಟಿ ಇಂತಿದೆ.
Advertisement
Board of Control for Cricket in India (BCCI) Annual Player Contracts 2018-19: Grade A- Ravichandran Ashwin, Ravindrasinh Jadeja, Bhuvneshwar Kumar, Cheteshwar Pujara, Ajinkya Rahane, MS Dhoni, Shikhar Dhawan, Md Shami, Ishant Sharma, Kuldeep Yadav, Rishabh Pant pic.twitter.com/6GwBcMQvhE
— ANI (@ANI) March 8, 2019
ಎ ಪ್ಲಸ್ ಶ್ರೇಣಿ (7 ಕೋಟಿ ರೂ.): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ.
ಎ ಶ್ರೇಣಿ (5 ಕೋಟಿ ರೂ.): ಆರ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಧೋನಿ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲ್ಡೀಪ್ ಯಾದವ್, ರಿಷಬ್ ಪಂತ್.
ಬಿ ಶ್ರೇಣಿ (3 ಕೋಟಿ ರೂ.): ಕೆಎಲ್ ರಾಹುಲ್, ಉಮೇಶ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ.
ಸಿ ಶ್ರೇಣಿ (1 ಕೋಟಿ ರೂ.): ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು, ಮನೀಷ್ ಪಾಂಡ್ಯ, ಹನುಮ ವಿಹಾರಿ, ಖಲೀಲ್ ಅಹ್ಮದ್, ವೃದ್ಧಿಮಾನ್ ಸಹಾ.
#TeamIndia Annual Player Contracts 2018-19: Grade C@JadhavKedar @DineshKarthik @RayuduAmbati @im_manishpandey @Hanumavihari @imK_Ahmed13 @Wriddhipops pic.twitter.com/R7NfNhlQuI
— BCCI (@BCCI) March 7, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv