ಮುಂಬೈ: 2024ರ ಟಿ20 ವಿಶ್ವಕಪ್ (T20 WorldCup) ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ (BCCI) ಭಾರತ ತಂಡದಲ್ಲಿ (Team India) ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಅದಕ್ಕಾಗಿ ಭಾರತ ತಂಡದಲ್ಲಿ ಕನಿಷ್ಠ 6 ಅಥವಾ 7 ಹಿರಿಯ ಆಟಗಾರರಿಗೆ ಬ್ರೇಕ್ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
Advertisement
ರೋಹಿತ್ ಶರ್ಮಾ (Rohit Sharma)), ವಿರಾಟ್ ಕೊಹ್ಲಿ (Virat Kohli), ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ದಿನೇಶ್ ಕಾರ್ತಿಕ್ ಹಾಗೂ ಆರ್.ಅಶ್ವಿನ್‌ಗೆ ಇನ್ನು ಮುಂದೆ ತಮಗೆ ಟಿ20 ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎನ್ನುವ ವಿಷಯವನ್ನು ಬಿಸಿಸಿಐ ಮನವರಿಕೆ ಮಾಡಿಕೊಟ್ಟಿದೆ. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ
Advertisement
Advertisement
ಈ 6 ಆಟ ಗಾರರ ಜೊತೆಗೆ ಕೆ.ಎಲ್.ರಾಹುಲ್ ? (KL Rahul) ಅವರನ್ನೂ ಟಿ20 ತಂಡದಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್‌ಗೆ ಇನ್ನೂ ಕೆಲ ಅವಕಾಶಗಳನ್ನು ನೀಡಲು ಬಿಸಿಸಿಐ ಚಿಂತಿಸುತ್ತಿದೆ. ಒಂದು ವೇಳೆ ಅವರು ಅವಕಾಶಗಳನ್ನು ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳದಿದ್ದರೇ, ಟಿ20 ತಂಡದಿಂದ ಹೊರಹಾಕಕಲಾಗುವುದು ಎಂಬ ಮಾಹಿತಿ ಹೊರಹಾಕಿದೆ. ಆದರೆ ಈ ಬಗ್ಗೆ ಬಿಸಿಸಿಐ (BCCI) ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿಲ್ಲ.
Advertisement
2022ರ ಟಿ20 ವಿಶ್ವಕಪ್ ಸೋಲಿನ ಬಳಿಕ ಭಾರತ ತಂಡದಲ್ಲಿ (Team India) ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಈಗಾಗಲೇ ರಣಜಿಯಲ್ಲಿ ಮಿಂಚುತ್ತಿರುವ ಪ್ರಮುಖ ಆಟಗಾರರ ಮೇಲೆ ಕಣ್ಣಿಡಲಾಗಿದೆ. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ
ಟೀಂ ಇಂಡಿಯಾದ ಏಕದಿನ ತಂಡದ ನಾಯಕತ್ವದಲ್ಲಿ ರೋಹಿತ್ ಶರ್ಮಾ ಮುಂದುವರಿದರೆ, ಟಿ20 ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ (Hardik Pandya) ಹೆಗಲಿಗೇರಿದೆ. ಆದರೆ ಭವಿಷ್ಯದ ಸ್ಟಾರ್ ಎನಿಸಿಕೊಂಡಿದ್ದ ರಿಷಭ್ ಪಂತ್ ಕಳಪೆ ಫಾರ್ಮ್‌ಗೆ ಬೆಲೆ ತೆತ್ತಿದ್ದಾರೆ. ಶ್ರೀಲಂಕಾ ಸರಣಿಯಿಂದ ಪಂತ್‌ಗೆ ಕೂಕ್ ನೀಡಲಾಗಿದೆ. ಸೂರ್ಯಕುಮಾರ್ ಯಾದವ್‌ಗೆ (Suryakumar Yadav) ಟಿ20 ತಂಡದ ಉಪನಾಯಕನ ಪಟ್ಟ ನೀಡಲಾಗಿದೆ. ಇತ್ತ ಏಕದಿನ ತಂಡದಲ್ಲಿ ಉಪನಾಯಕನಾಗಿದ್ದ ಕೆ.ಎಲ್ ರಾಹುಲ್ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ನೂತನ ಉಪನಾಯಕನ್ನಾಗಿ ಪಾಂಡ್ಯ ನೇಮಗೊಂಡಿದ್ದಾರೆ.