ಮುಂಬೈ: ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದ ಜಮ್ಮು-ಕಾಶ್ಮೀರದ ಯುವ ವೇಗಿ, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ರಸಿಕ್ ಸಲಾಮ್ ಮೇಲೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ.
ಬಿಸಿಸಿಐ ನಿಷೇಧದ ಪರಿಣಾಮ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿರುವ ಅಂಡರ್ 19 ತಂಡದಿಂದಲೂ ರಸಿಕ್ ಸಲಾಮ್ ಹೊರಗುಳಿದಿದ್ದಾರೆ. ಈ ಸ್ಥಾನದಲ್ಲಿ ಪ್ರಭಾತ್ ಮೌರ್ಯ ತಂಡವನ್ನು ಸೇರಿಕೊಂಡಿದ್ದಾರೆ. ಈ ಕುರಿತು ಬಿಸಿಸಿಐ ಬುಧವಾರ ಅಧಿಕೃತ ಮಾಹಿತಿ ನೀಡಿದ್ದು, ಜುಲೈ 21ರಿಂದ ಇಂಗ್ಲೆಂಡ್ ಟೂರ್ನಿ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ರಸಿಕ್ ರನ್ನ ಖರೀದಿ ಮಾಡಿತ್ತು. ಅಲ್ಲದೆ ಒಂದು ಪಂದ್ಯದಲ್ಲಿ ರಸಿಕ್ ಆಡುವ 11 ಬಳಗದಲ್ಲಿ ಸ್ಥಾನ ಪಡೆದು ಐಪಿಎಲ್‍ಗೆ ಪಾದಾರ್ಪಣೆಯನ್ನು ಮಾಡಿದ್ದು, ಪ್ರತಿಭಾನ್ವಿತ ಬೌಲರ್ ಆಗಿದ್ದರು. ಸದ್ಯ ವಿವಾದದ ಕಾರಣದಿಂದ ಅಮಾನತಾಗಿರುವುದು ಅವರ ವೃತ್ತಿ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಿಂದ ಐಪಿಎಲ್ ಪಾದಾರ್ಪಣೆ ಮಾಡಿದ್ದ 3ನೇ ಆಟಗಾರ ಎಂಬ ಖ್ಯಾತಿಯನ್ನು ರಸಿಕ್ ಪಡೆದಿದ್ದರು. ಟೀಂ ಇಂಡಿಯಾ ವೇಗಿ ಇರ್ಫಾನ್ ಪಠಾಣ್ ಅವರು ರಸಿಕ್ ಐಪಿಎಲ್‍ಗೆ ಕಾಲಿಡಲು ಪ್ರಮುಖ ಕಾರಣರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಮುಂಬೈ ತಂಡಕ್ಕೆ ಆಯ್ಕೆ ಆಗಿದ್ದರು. ಅಲ್ಲದೆ ಆಡಿದ ಮೊದಲ ಪಂದ್ಯದಲ್ಲೇ ವಿಕೆಟ್ ಕೂಡ ಕಬಳಿಸಿದ್ದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]