ಮುಂಬೈ: ಬಹು ದಿನಗಳಿಂದ ಚರ್ಚೆ ನಡೆಯುತ್ತಿದ್ದ ಭಾರತ ಕ್ರಿಕೆಟ್ ಆಟಗಾರರ ಪ್ರತ್ಯೇಕ ಸಂಘ ರಚನೆಗೆ ಬಿಸಿಸಿಐ ಅನುಮತಿ ನೀಡಿದ್ದು, ಬಿಸಿಸಿಐ ಹೊಸ ನಿಯಮಾವಳಿಗಳ ಅನ್ವಯ ಜಾರಿಗೆ ಸಿದ್ಧತೆ ನಡೆಸಲಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರ ಸಂಘಕ್ಕೆ ಭಾರತ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಭಾರತ ನಿವೃತ್ತ ಮಹಿಳಾ ಹಾಗೂ ಪುರುಷ ಕ್ರಿಕೆಟಿಗರ ಆಟಗಾರರಿಗೆ ಸಂಘದ ಸದಸ್ಯತ್ವದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಈ ಸಂಸ್ಥೆ ಲಾಭ ರಹಿತ ಸಂಘವಾಗಿದ್ದು, 2013ರ ಕಂಪೆನಿಯ ಸೆಕ್ಷನ್ 8ರ ಅನ್ವಯ ಸಂಘಕ್ಕೆ ಒಪ್ಪಿಗೆ ನೀಡಲಾಗಿದೆ. ಸಂಘದ ಆರಂಭದ ಸಮಯದಲ್ಲಿ ಸ್ವಲ್ಪ ಮೊತ್ತವನ್ನು ಬಿಸಿಸಿಐ ನೀಡಲಿದೆ. ಆದರೆ ಆ ಬಳಿಕ ಸ್ವತಃ ಆದಾಯ ಗಳಿಸುವ ಮಾರ್ಗವನ್ನು ಸಂಸ್ಥೆ ಗಳಿಸಬೇಕಿದೆ ಎಂದು ಬೋರ್ಡ್ ಸೂಚಿಸಿದೆ.
ಕ್ರಿಕೆಟ್ ಆಟಗಾರರ ಸಂಸ್ಥೆಗೆ ಚುನಾವಣೆ ನಡೆಯುವವರೆಗೂ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಅಜಿತ್ ಅಗರ್ಕರ್, ಶಾಂತ ರಂಗಸ್ವಾಮಿ ನಿರ್ದೇಶಕರಾಗಿರುತ್ತಾರೆ. ಮಾಜಿ ಕ್ರಿಕೆಟಿಗರಿಗೆ ಮಾತ್ರ ಸಂಘದ ಸದಸ್ಯತ್ವ ಲಭಿಸಲಿದೆ. ಆದರೆ ವಿದೇಶಿ ಆಟಗಾರರ ಸಂಸ್ಥೆಗಳಲ್ಲಿ ಸದ್ಯ ಆಡುತ್ತಿರುವ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.