– ಈ ವರ್ಷ ಕೇವಲ 27 ಆಟಗಾರರಿಗೆ ಅವಕಾಶ
– ವೃದ್ಧಿಮಾನ್ ಸಹಾ, ಕೆ.ಎಲ್.ರಾಹುಲ್‍ಗೆ ಬಡ್ತಿ
– 6 ಜನ ಹೊಸಬರು, ಎ+ ನಲ್ಲಿ ಮೂವರು ಮಾತ್ರ
ಮುಂಬೈ: ಬಿಸಿಸಿಐ ತನ್ನ ಒಪ್ಪಂದದ ಆಟಗಾರರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಪಟ್ಟಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈ ಬಿಡಲಾಗಿದೆ.
ಕಳೆದ ವರ್ಷ ಎ ಗ್ರೇಡ್‍ನಲ್ಲಿದ್ದ ಧೋನಿ ಅವರು ಯಾವುದೇ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬಿಸಿಸಿಐ ಪ್ರಸ್ತುತ 27 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಉನ್ನತ ದರ್ಜೆಯ ‘ಎ ಪ್ಲಸ್’ ನೀಡಲಾಗಿದೆ. ಈ ಮೂವರೂ ಆಟಗಾರರು ಕಳೆದ ವರ್ಷವೂ ಇದೇ ದರ್ಜೆಯಲ್ಲಿದ್ದರು. ಧೋನಿ ಅಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್, ಅಂಬಟಿ ರಾಯುಡು ಮತ್ತು ಖಲೀಲ್ ಅಹ್ಮದ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.
Advertisement
Advertisement
ಬಿಸಿಸಿಐ ಮೂಲಗಳ ಪ್ರಕಾರ, ಎಂ.ಎಸ್.ಧೋನಿ 2019ರ ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿ ಬಳಿಕ ಯಾವುದೇ ಟಿ20, ಏಕದಿನ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಅವರನ್ನು ಒಪ್ಪಂದದ ಪಟ್ಟಿಯಿಂದ ಹೊರಗಿಡುವ ಬಗ್ಗೆ ಮಂಡಳಿಯು ಈಗಾಗಲೇ ಮಾಹಿತಿ ನೀಡಿತ್ತು ಎಂದು ವರದಿಯಾಗಿದೆ.
Advertisement
ಧೋನಿಯನ್ನು ಕೈಬಿಟ್ಟಿದ್ಯಾಕೆ?
ಮಂಡಳಿಯ ಒಪ್ಪಂದಕ್ಕೆ ಸೇರಲು ಒಬ್ಬ ಆಟಗಾರ ನಿಗದಿತ ಋತುವಿನಲ್ಲಿ ಕನಿಷ್ಠ 3 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗುತ್ತದೆ. ಆದರೆ ಧೋನಿ 9 ಜುಲೈ 2019ರಂದು ಏಕದಿನ ವಿಶ್ವಕಪ್‍ನಲ್ಲಿ ಆಡಿದ ಸೆಮಿಫೈನಲ್ ಪಂದ್ಯದ ನಂತರ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಲಿಲ್ಲ.
Advertisement
The BCCI announces the Annual Player Contracts for Team India (Senior Men) for the period from October 2019 to September 2020.
Saini, Mayank, Shreyas, Washington and Deepak Chahar get annual player contracts.
More details here – https://t.co/84iIn1vs9B #TeamIndia pic.twitter.com/S6ZPq7FBt1
— BCCI (@BCCI) January 16, 2020
ಧೋನಿ ಇದೇ ವರ್ಷ ಒಪ್ಪಂದಕ್ಕೆ ಮರಳಬಹುದೇ?
ಬಿಸಿಸಿಐ ಅಧಿಕಾರಿಯ ಪ್ರಕಾರ, ಎಂ.ಎಸ್.ಧೋನಿ ಅವರನ್ನು ಈ ವರ್ಷ ಯಾವುದೇ ಸಮಯದಲ್ಲಿ ಟಿ20 ತಂಡದಲ್ಲಿ ಸೇರಿಸಿಕೊಂಡರೆ ಅವರನ್ನು ಮತ್ತೆ ಒಪ್ಪಂದಕ್ಕೆ ಸೇರಿಸಿಕೊಳ್ಳಬಹುದು. ಅವರು ಪ್ರಸ್ತುತ ಗುತ್ತಿಗೆ ಪಟ್ಟಿಯಲ್ಲಿಲ್ಲ. ಆದರೆ ಇನ್ನೂ ಏಷ್ಯಾ ಕಪ್ ಟಿ20 ಆಗಿಲ್ಲ. ಎಂ.ಎಸ್.ಧೋನಿ ಅಗತ್ಯ ಸಂಖ್ಯೆಯ ಪಂದ್ಯಗಳನ್ನು ಆಡಿದರೆ ನೇರವಾಗಿ ಒಪ್ಪಂದಕ್ಕೆ ಸೇರುತ್ತಾರೆ.
ಹೊಸ ಮುಖಗಳು?:
ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ನವದೀಪ್ ಸೈನಿ, ದೀಪಕ್ ಚಹರ್, ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಮೊದಲ ಬಾರಿಗೆ ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಾಯಾಂಕ್‍ಗೆ ಗ್ರೇಡ್ ಬಿ ಸ್ಥಾನ ಸಿಕ್ಕಿದೆ. ಉಳಿದ ಆಟಗಾರರು ಗ್ರೇಡ್ ಸಿ ಪಡೆದುಕೊಂಡಿದ್ದಾರೆ.
ಎಷ್ಟು ಆಟಗಾರರಿಗೆ ಬಡ್ತಿ?
ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ವೃದ್ಧಿಮಾನ್ ಸಹಾ ಅವರಿಗೆ ಬಿಸಿಸಿಐ ಬಡ್ತಿ ನೀಡಿದೆ. ರಾಹುಲ್ ಕಳೆದ ವರ್ಷ ಬಿ ಗ್ರೇಡ್‍ನಲ್ಲಿದ್ದರು. ಈ ಬಾರಿ ಅವರನ್ನು ಎ ಗ್ರೇಡ್‍ಗೆ ಸೇರಿಸಲಾಗಿದೆ. ಸಿ ಗ್ರೇಡ್‍ನಲ್ಲಿದ್ದ ಸಹಾ ಈ ಬಾರಿ ಬಿ ಗ್ರೇಡ್ ಪಡೆದುಕೊಂಡಿದ್ದಾರೆ.
ಎ+ ಗ್ರೇಡ್: 7 ಕೋಟಿ ರೂ. ಒಪ್ಪಂದದ ಎ+ ಗ್ರೇಡ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.
ಎ ಗ್ರೇಡ್, 5 ಕೋಟಿ ರೂ,:
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಚತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಷಭ್ ಪಂತ್ ಹಾಗೂ ಮಾಯಾಂಕ್ ಅಗರ್ವಾಲ್.
ಬಿ ಗ್ರೇಡ್ 3 ಕೋಟಿ ರೂ,:
ರಿದ್ಧಿಮಾನ್ ಸಹಾ, ಉಮೇಶ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ ಹಾಗೂ ಮಾಯಾಂಕ್ ಅಗರ್ವಾಲ್.
ಸಿ ಗ್ರೇಡ್ 1 ಕೋಟಿ ರೂ:
ಒಟ್ಟು 8 ಆಟಗಾರರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಈ ಪೈಕಿ 5 ಆಟಗಾರರು ಹೊಸಬರಾಗಿದ್ದಾರೆ. ಕೇದಾರ ಜಾಧವ್, ನವದೀಪ್ ಸೈನಿ, ದೀಪರ್ ಚಹರ್, ಮನೀಶ್ ಪಾಂಡೆ, ಹನುಮ ವಿಹಾರಿ, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್ ಹಾಗೂ ವಾಷಿಂಗ್ಟನ್ ಸುಂದರ್.