ಮುಂಬೈ: 2023 ರಿಂದ 2027ರ ಅವಧಿಯ ಐಪಿಎಲ್ ಮಾಧ್ಯಮ ಹಕ್ಕು ಹರಾಜಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೆಂಡರ್ ಆಹ್ವಾನಿಸಿದೆ.
Advertisement
ಈ ಬಗ್ಗೆ ಪ್ರಕಟಣೆ ಹೊರಡಿಸಿದ ಬಿಸಿಸಿಐ, ಟೆಂಡರ್ ಖರೀದಿಸಲು ಇಚ್ಚಿಸುವ ಕಂಪನಿಗೆ ಮೇ 10ರ ವರೆಗೆ ಅವಕಾಶ ನೀಡಿದ್ದು, ಟೆಂಡರ್‌ಗೆ 25 ಲಕ್ಷ ರೂಪಾಯಿ ಮೂಲ ಬೆಲೆ ನಿಗದಿ ಮಾಡಿದೆ. ಹರಾಜು ಪ್ರಕ್ರಿಯೆಗೆ ಭಾಗವಹಿಸುವ ಕಂಪನಿ ಸೂಕ್ತ ದಾಖಲೆಯೊಂದಿಗೆ ಭಾಗವಹಿಸಲು ಸೂಚಿಸಿದೆ. ಟೆಂಡರ್‌ಗೆ 25 ಲಕ್ಷ ರೂ. ನಿಗದಿ ಪಡಿಸಿರುವ ಬಿಸಿಸಿಐ, ಮಾಧ್ಯಮ ಹಕ್ಕು 50,000 ಕೋಟಿ ರೂ.ಗೂ ಹೆಚ್ಚು ಮೊತ್ತಕ್ಕೆ ಮಾರಾಟಗುವ ನಿರೀಕ್ಷೆಯಲ್ಲಿದೆ. ಹರಾಜು ಪ್ರಕ್ರಿಯೆಯನ್ನು ಟಿವಿ, ಡಿಜಿಟಲ್ ಹಕ್ಕು ಸೇರಿದಂತೆ 4 ವಿಭಾಗಗಳಲ್ಲಿ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಐಪಿಎಲ್ ರದ್ದು ಬಿಸಿಸಿಐಗೆ 2000 ಕೋಟಿ ನಷ್ಟ
Advertisement
ಇದೀಗ 15ನೇ ಆವೃತ್ತಿ ಐಪಿಎಲ್ ನಡೆಯುತ್ತಿದ್ದು, ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಆಡುತ್ತಿದೆ. ಮುಂದಿನ ಆವೃತ್ತಿಯಲ್ಲೂ 10 ತಂಡಗಳು ಮುಂದುವರಿಯುವ ಕಾರಣ ಪಂದ್ಯಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹಾಗಾಗಿ ಜಾಹೀರಾತು ಮೂಲಕ ಹರಿದುಬರುವ ಹಣ ಮತ್ತಷ್ಟು ಏರಿಕೆಯಾಗಲಿದೆ. ಈಗಾಗಲೇ ಹರಾಜಿನಲ್ಲಿ ಹಲವು ಕಂಪನಿಗಳು ಭಾಗವಹಿಸಲು ಇಚ್ಚಿಸಿದ್ದು, ಬಿಸಿಸಿಐ ಬಂಪರ್ ಆದಾಯದ ಲೆಕ್ಕಾಚಾರದಲ್ಲಿದೆ.
Advertisement
Advertisement
ಬಿಡ್ ಗೆದ್ದಿದ್ದು ಸ್ಟಾರ್ ಇಂಡಿಯಾ:
2018 ರಿಂದ 2022ರವರೆಗಿನ ಐಪಿಎಲ್ ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. 2017ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು. ಇದನ್ನೂ ಓದಿ: ಐಪಿಎಲ್ ರದ್ದಾದ್ರೆ ಕೋಟಿ ಕೋಟಿ ನಷ್ಟ – ಯಾರಿಗೆ ಎಷ್ಟು? ಇಲ್ಲಿದೆ ಲೆಕ್ಕ
ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ, ಸ್ಟಾರ್ ಇಂಡಿಯಾ 6,196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕುಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.
NEWS ???? – Board of Control for Cricket in India (BCCI) announces release of Invitation to Tender for Media Rights to the Indian Premier League Seasons 2023-2027.
More details here – https://t.co/8DfoQCYrA2 #TATAIPL
— BCCI (@BCCI) March 29, 2022
ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು. ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‌ಟೆಲ್ ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.