ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟರ್‌ಗೆ ಬಿಸಿಸಿಐನಿಂದ 1 ಕೋಟಿ ಆರ್ಥಿಕ ನೆರವು!

Public TV
2 Min Read
Jay Shah 1

ಮುಂಬೈ: ರಕ್ತದ ಕ್ಯಾನ್ಸರ್‌ನಿಂದ (Blood Cancer) ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಮುಖ್ಯ ಕೋಚ್ ಅಂಶುಮಾನ್ ಗಾಯಕ್ವಾಡ್ (Anshuman Gaekwad) ಅವರ ಚಿಕಿತ್ಸೆಗಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ 1 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿದೆ.

BCCI

ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ್ವಾಡ್‌ ಅವರಿಗೆ ತಕ್ಷಣವೇ ನಿಧಿ ಬಿಡುಗಡೆ ಮಾಡುವಂತೆ ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ (Jay Shah) ತಿಳಿಸಿದ್ದರು. ಅಲ್ಲದೇ ಗಾಯಕ್ವಾಡ್‌ ಅವರ ಕುಟುಂಬದ ಪರಿಸ್ಥಿತಿ ಪರಿಶೀಲಿಸಿ ನೆರವು ನೀಡಲಾಗುತ್ತಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಬಿಸಿಸಿಐ ಗಾಯಕ್ವಾಡ್‌ ಕುಟುಂಬದೊಂದಿಗೆ ಇರಲಿದೆ. ಅವರ ತ್ವರಿತ ಚಿಕಿತ್ಸೆಗೆ ಅಗತ್ಯ ಸಹಾಯ ಮಾಡಲಿದೆ ಎಂದು ಸಹ ಹೇಳಿದ್ದರು. ಈ ಹಿನ್ನೆಲೆಯಲ್ಲಿ 1 ಕೋಟಿ ರೂ. ಆರ್ಥಿಕ ನೆರವು ನೀಡಲು ಘೋಷಿಸಿರುವುದಾಗಿ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

Anshuman Gaekwad

ಗಾಯಕ್ವಾಡ್ ಅವರು ಟೀಂ ಇಂಡಿಯಾದ ಮಾಜಿ ನಾಯಕ ಡಿ.ಕೆ ಗಾಯಕ್ವಾಡ್ ಅವರ ಪುತ್ರ. ಪ್ರಸ್ತುತ ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 71 ವರ್ಷ ವಯಸ್ಸಿನ ಗಾಯಕ್ವಾಡ್ 1975 ಮತ್ತು 1987ರ ನಡುವೆ ಭಾರತ ಕ್ರಿಕೆಟ್‌ ತಂಡಕ್ಕಾಗಿ ಅಪಾರವಾಗಿ ಶ್ರಮಿಸಿದ್ದಾರೆ. 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದನ್ನೂ ಓದಿ: AR Wedding: ಕುಟುಂಬದ ಜೊತೆ ನಿಲ್ಲದೆ ಮಗಳೊಂದಿಗೆ ಪೋಸ್ ಕೊಟ್ಟ ಐಶ್ವರ್ಯಾ ರೈ

ಕಪಿಲ್‌ ಭಾವುಕ:
ಗಾಯಕ್ವಾಡ್‌ ಅವರ ಅನಾರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌, ಟೀಂ ಇಂಡಿಯಾದ ಮಾಜಿ ಆಟಗಾರ ಬಳಲುತ್ತಿರುವುದು ನೋಡಿ ನೋವಾಗಿದೆ. ಅವರೊಂದಿಗೆ ನಾನು ಕ್ರಿಕೆಟ್‌ ಆಡಿದ್ದೇನೆ. ಇಂತಹ ಸ್ಥಿತಿಯಲ್ಲಿ ಅವರನ್ನು ನೋಡಲು ಸಾಧ್ಯವಾಗುತ್ತಿಲ್ಲ. ಬಿಸಿಸಿಐ ಅವರಿಗೆ ಅಗತ್ಯ ನೆರವು ನೀಡಲಿದೆ ಎಂದು ಭಾವಿಸುತೇನೆ ಎಂದು ಭಾವುಕರಾಗಿದ್ದರು. ಈ ಬೆನ್ನಲ್ಲೇ ಬಿಸಿಸಿಐ ನೆರವು ಘೋಷಣೆ ಮಾಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ 

Share This Article