– ರಣಜಿಯಲ್ಲಿ ಕಳ್ಳಾಟ ಆಡಿದ ಅಯ್ಯರ್, ಇಶಾನ್ ಕಿಶನ್‌ಗೆ ಬಿಸಿಮುಟ್ಟಿಸಿದ ಬಿಸಿಸಿಐ
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2023-24ರ ಋತುವಿನ (ಅಕ್ಟೋಬರ್ 1, 2023 ರಿಂದ ಸೆಪ್ಟೆಂಬರ್ 30, 2024 ರವರೆಗೆ) ಟೀಂ ಇಂಡಿಯಾದ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟ ಮಾಡಿದೆ.
ನಿರೀಕ್ಷೆಯಂತೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli), ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರನ್ನ ಎ+ ವರ್ಗದಲ್ಲಿ ಇರಿಸಲಾಗಿದೆ. ಆದ್ರೆ ಬಿಸಿಸಿಐನ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರರು ಐಪಿಎಲ್‌ಗಿಂತ ರಣಜಿ ಟ್ರೋಫಿಯನ್ನೇ ಮುಖ್ಯವಾಗಿ ಆಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರ ಸೂಚನೆಯನ್ನು ನಿರ್ಲಕ್ಷ್ಯ ಮಾಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಇಶಾನ್, ಕಿಶನ್ ಅವರಿಗೆ ಕೊಕ್ ನೀಡಿದೆ. ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಶಮಿ ಕಾಲಿಗೆ ಶಸ್ತ್ರಚಿಕಿತ್ಸೆ – ಐಪಿಎಲ್‌ನಿಂದ ಹೊರಗೆ?
Advertisement
Advertisement
ಪ್ರಸಕ್ತ ವರ್ಷದಿಂದಲೇ ಟಿ20 ವಿಶ್ವಕಪ್ (T20 World Cup) ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ, ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಸಾಮರ್ಥ್ಯ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಮಣೆ ಹಾಕಿದೆ. ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ಜಿತೇಶ್ ಶರ್ಮಾ, ಮುಕೇಶ್ ಕುಮಾರ್ ಅವರನ್ನು ಸಿ-ವರ್ಗಕ್ಕೆ ಸೇರಿಸಲಾಗಿದೆ. ಇದರೊಂದಿಗೆ ಕಳೆದ ವರ್ಷ ಏಷ್ಯಾಕಪ್, ಏಕದಿನ ವಿಶ್ವಕಪ್ ಟೂರ್ನಿ ಆಯ್ಕೆಯಿಂದ ವಂಚಿರಾದ ಸಂಜು ಸ್ಯಾಮ್ಸನ್ ಅವರನ್ನೂ ಸಿ ವರ್ಗಕ್ಕೆ ಸೇರಿಸಲಾಗಿದೆ. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ ʻಪೆನಾಲ್ಟಿ ಟೈಮ್ʼ, ʻಟರ್ನಿಂಗ್ ಟ್ರ್ಯಾಕ್ʼ ಕುತೂಹಲ!
Advertisement
ಗ್ರೇಡ್-A+ (4 ಕ್ರೀಡಾಪಟುಗಳು)
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
Advertisement
ಗ್ರೇಡ್-A (6 ಕ್ರೀಡಾಪಟುಗಳು)
ಆರ್. ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್-B (5 ಕ್ರೀಡಾಪಟುಗಳು)
ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್-C (15 ಕ್ರೀಡಾಪಟುಗಳು)
ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್. ಇದನ್ನೂ ಓದಿ: WPL 2024: ಆರ್‌ಸಿಬಿ ಸ್ಟಾರ್ ಶ್ರೇಯಾಂಕ ಪಾಟೀಲ್‌ಗೆ ಮದುವೆ ಪ್ರಪೋಸಲ್ ಕೊಟ್ಟ ಅಭಿಮಾನಿ
ಆಟಗಾರರಿಗೆ ವಾರ್ಷಿಕ ಸಂಬಳ ಎಷ್ಟು?
ಗ್ರೇಡ್ A+: 7 ಕೋಟಿ ರೂ.
ಗ್ರೇಡ್ A: 5 ಕೋಟಿ ರೂ.
ಗ್ರೇಡ್ ಬಿ: 3 ಕೋಟಿ ರೂ.
ಗ್ರೇಡ್ ಸಿ: 1 ಕೋಟಿ ರೂ.
ಪ್ರತಿ ಪಂದ್ಯಕ್ಕೆ ನಿಗದಿಯಾಗಿರುವ ವೇತನ ಎಷ್ಟು?
ಟೆಸ್ಟ್ ಪಂದ್ಯ ಶುಲ್ಕ: ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆದಿದ್ದರೆ 15 ಲಕ್ಷ ರೂ., ಪಡೆಯದಿದ್ದರೇ 7.5 ಲಕ್ಷ ರೂ.
ಏಕದಿನ ಪಂದ್ಯದ ಶುಲ್ಕ: ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆದಿದ್ದರೆ 6 ಲಕ್ಷ ರೂ., ಪಡೆಯದಿದ್ದರೇ 3 ಲಕ್ಷ ರೂ.
T20I ಪಂದ್ಯ ಶುಲ್ಕ: ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆದಿದ್ದರೆ, 3 ಲಕ್ಷ ರೂ., ಪಡೆಯದಿದ್ದರೇ 1.5 ಲಕ್ಷ ರೂ.
ಅಲ್ಲದೇ ಬಿಸಿಸಿಐ ವಾರ್ಷಿಕ ಒಪ್ಪಂದದ ಪ್ರಕಾರ, ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್ ಅಥವಾ 8 ಏಕದಿನ ಪಂದ್ಯ ಅಥವಾ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡುವ ಮಾನದಂಡ ಪೂರೈಸುವ ಆಟಗಾರನನ್ನು ಸಹಜವಾಗಿಯೇ ಗ್ರೇಡ್-ʻಸಿʼಗೆ ಸೇರಿಸಲಾಗುತ್ತದೆ. ಉದಾಹರಣೆಗೆ, ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರು ಇಲ್ಲಿಯವರೆಗೆ 2 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಅವರು ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದರೆ ಮಾನದಂಡ ಪೂರ್ಣಗೊಳಿಸಿದಂತಾಗುತ್ತದೆ. ನಂತರ ಗ್ರೇಡ್-ಸಿ ವರ್ಗಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಲ್ಲದೇ ಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಸೂಚಿಸಿದೆ.