Connect with us

Bengaluru City

ಸಿನಿಮಾ ಸ್ಟೈಲ್‍ನಲ್ಲಿ ಡೈಲಾಗ್ ಹೇಳಿ ಮೀಸೆ ತಿರುವಿದ ಕೌರವ

Published

on

– ವಿರೋಧಿಗಳಿಗೆ ಬಿ.ಸಿ ಪಾಟೀಲ್ ಟಾಂಗ್

ಬೆಂಗಳೂರು: ಭಾವಿ ಸಚಿವ ಬಿಸಿ ಪಾಟೀಲ್ ಮನೆಯಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. ಮಗಳು ಸೃಷ್ಟಿ ಪಾಟೀಲ್, ಪತ್ನಿ ವನಜಾ ಪಾಟೀಲ್ ಸಡಗರದಿಂದ ಇದ್ದಾರೆ. ಮನೆಯಲ್ಲಿ ವಿಶೇಷವಾಗಿ ದೇವರ ಪೂಜೆ ಮಾಡಲಾಗಿತ್ತು. ಇಬ್ಬರು ಪುತ್ರಿಯರು, ಅಳಿಯಂದರು, ಸಂಬಂಧಿಕರು, ಅಭಿಮಾನಿಗಳು ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಭಾವಿ ಸಚಿವ ಬಿ.ಸಿ ಪಾಟೀಲ್, ಸಿದ್ದರಾಮಯ್ಯ ಬೇರೆಯವರ ಹೆಸರಿನಲ್ಲಿ ಮನೆಯಲ್ಲಿದ್ದರು. ಈಗ ನಮ್ಮ ಸರ್ಕಾರ ಬಂದ ಮೇಲೆ ನಾವೇ ಸರ್ಕಾರಿ ಬಂಗಲೆ ಕೊಡಿಸಿದ್ದೀವಿ. ಈಗಲಾದ್ರೂ ಸ್ವಂತ ಹೆಸರಿನ ಮನೆಯಲ್ಲಿ ಇರಲಿ ಎಂದರು. ಜೊತೆಗೆ ಡಿಕೆಶಿಗೂ ಟಾಂಗ್ ನೀಡಿ, ರಾಜಕೀಯ ಸಮಾಧಿ ಅಂದಿದ್ರಿ, ಆದರೆ ನಾವು ಸಂಭ್ರಮದಲ್ಲಿದ್ದೀವಿ. ಈಗ ನೀವುಗಳು ನಮ್ಮ ರಾಜಕೀಯ ಗೆಲ್ಲುವು ನೋಡಿ ಎಂದು ಕೌರವ ಸ್ಟೈಲ್‍ನಲ್ಲಿ ಮೀಸೆ ತಿರುವಿದರು.

ಬಿಸಿ ಪಾಟೀಲ್ ಪತ್ನಿ ಮಾತ್ರ ಸಂಪೂರ್ಣ ಭಾವುಕರಾಗಿ ಕಣ್ಣೀರು ಹಾಕಿದರು. ಪೊಲೀಸ್ ಇಲಾಖೆ ಬಿಟ್ಟಾಗ ಸರ್ಕಾರಿ ಕೆಲಸ ಹೋಯಿತು ಎಂದು ದುಃಖವಾಗಿ ಕಣ್ಣೀರು ಹಾಕಿದೆ. ಈಗ ಸಚಿವರು ಆಗುತ್ತಿದ್ದಾರೆ ಎಂದು ಆನಂದಭಾಷ್ಪ ಬರುತ್ತಿದೆ ಎಂದು ಪತ್ನಿ ವನಜಾ ತಿಳಿಸಿದರು.

ಇತ್ತ ಮಗಳು ಸೃಷ್ಡಿ ಪಾಟೀಲ್ ಮಾತನಾಡಿ, ಜೆಡಿಎಸ್ ಪಕ್ಷ ಅಪ್ಪಾಜಿಗೆ ಮೋಸ ಮಾಡಿತು. ಕಾಂಗ್ರೆಸ್ಸಿನಲ್ಲಿ ಗೆದ್ದರೂ ಮನ್ನಣೆ ನೀಡಿರಲಿಲ್ಲ. ಈಗ ಬಿಜೆಪಿಗೆ ಬಂದಾಗ ಜನ ಖುಷಿ ಪಟ್ಟರು ಕಡೆಗೆ ನಾವು ಖುಷಿಯಾಗಿದ್ದೀವಿ. ಮುಂದೆ ಕ್ಷೇತ್ರದ ಜನರ ಕೆಲಸಕ್ಕೆ ಮಾತ್ರ ಅಪ್ಪಾಜಿಯ ಕೆಲಸದಲ್ಲಿ ತಲೆ ಹಾಕುವೆ. ಉಳಿದಂತೆ ರಾಜಕೀಯ ಹಸ್ತಾಕ್ಷೇಪ ಮಾಡಲ್ಲ. ನಮ್ಮ ತಂದೆ ಪೊಲೀಸ್ ಇಲಾಖೆಯಲ್ಲಿದ್ದರು. ಅದೇ ಖಾತೆ ಕೊಟ್ಟರೆ ಚೆನ್ನಾಗಿ ನಿಭಾಯಿಸುತ್ತಾರೆ ಎಂದರು.

ಮನೆಗೆ ಬಂದ ಅಭಿಮಾನಿಗಳಿಗೆ ಬಿ.ಸಿ ಪಾಟೀಲ್ ಮನೆಯಲ್ಲಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಜೊತೆಗೆ ವಿಕ್ಟರಿ ಸಿಂಬಲ್ ಬಿಸಿ ಪಾಟೀಲ್ ತೋರಿಸಿದರು. ಮುಂಜಾನೆ ವೈಟ್ ಅಂಡ್ ವೈಟ್ ಲುಕ್ ನಲ್ಲಿದ್ದ ಪಾಟೀಲ್ ನಂತರ ಪ್ರಮಾಣವಚನಕ್ಕೆ ಎಂದೇ ಕಲರ್ ಫುಲ್ ಆಗಿ ಸಿದ್ಧರಾಗಿದರು. ಇತ್ತ ಮನೆಗೆ ಬಂದ ಅಭಿಮಾನಿಗಳು ಗಿಡ ಹಾಗೂ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು.

Click to comment

Leave a Reply

Your email address will not be published. Required fields are marked *