ಹಾವೇರಿ: ಸಿ.ಎಂ.ಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನ ಆಂಜನೇಯ ದೇವಸ್ಥಾನಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಮರ್ಪಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 28, ರಂದು ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ ಸಿಎಂಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೆಳ್ಳಿ ಗದೆಯನ್ನು ಉಡುಗೊರೆ ನೀಡಿದ್ದರು. ಇದನ್ನೂ ಓದಿ: ಮಳೆಯಿಂದ ಹಾಸ್ಟೆಲ್ ಜಲಾವೃತ: ರಾತ್ರಿಯಿಡೀ ಛಾವಣಿ ಹತ್ತಿ ಕುಳಿತ ವಿದ್ಯಾರ್ಥಿಗಳು
Advertisement
ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿ, ಗಧೆಯನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.#Haveri | #Hirekerur | #Byadgi | @BJP4Karnataka | @BJP4India | @BSBommai
— Kourava B.C.Patil (@bcpatilkourava) September 27, 2021
Advertisement
ಈ ಉಡುಗೊರೆಯನ್ನ ಆಂಜನೇಯ ದೇವಸ್ಥಾನಕ್ಕೆ ನೀಡುವಂತೆ ಸಿಎಂ ಬೊಮ್ಮಾಯಿ ಹೇಳಿದ್ದರು. ಹೀಗಾಗಿ ಇಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಆಂಜನೇಯ ದೇವಸ್ಥಾನಕ್ಕೆ ಬೆಳ್ಳಿ ಗದೆ ಸಮರ್ಪಣೆ ಮಾಡಲಾಗಿದೆ. ಆಂಜನೇಯ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೆಸರಿನಲ್ಲಿ ಪೂಜೆ ಮಾಡಿಸಿ, ಗದೆಯನ್ನ ದೇವಸ್ಥಾನಕ್ಕೆ ಬಿ.ಸಿ.ಪಾಟೀಲ್ ಬೆಳ್ಳಿ ಗದೆ ಅರ್ಪಿಸಿದ್ದಾರೆ. ಇದನ್ನೂ ಓದಿ: ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ
Advertisement
ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಹಿರೇಕೆರೂರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಬೆಳ್ಳಿಯ ಗದೆಯನ್ನು ನೀಡಲಾಗಿತ್ತು. ಆ ಗಧೆಯನ್ನು ಆಂಜನೇಯ ದೇವಸ್ಥಾನಕ್ಕೆ ನೀಡುವಂತೆ ಮುಖ್ಯಮಂತ್ರಿಗಳು ಹೇಳಿದ್ದ ಹಿನ್ನೆಲೆಯಲ್ಲಿ ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, pic.twitter.com/IpUjqObQci
— Kourava B.C.Patil (@bcpatilkourava) September 27, 2021
Advertisement
ಬಿ.ಸಿ.ಪಾಟೀಲ್ ಅವರಿಗೆ ಬ್ಯಾಡಗಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾದ ಆರ್.ಎನ್.ಗಂಗೋಳ, ರವಿ ಮೆಣಸಿನಕಾಯಿ ಸಾಥ್ ನೀಡಿದರು. ಸಿ.ಎಂ ಉಡುಗೊರೆಯನ್ನು ತೆಗೆದುಕೊಳ್ಳದೆ, ಅದನ್ನ ದೇವರಿಗೆ ನೀಡಿ ಸರಳತೆ ಮೆರೆದಿದ್ದಾರೆ.