ಸೊಸೆಯಾಗಿ ಬಂದು ಮೊಳೆ ಹೊಡೆದು ಮನೆ ಮಗಳಾಗಿದ್ದೇವೆ, ನಾವು ಪಕ್ಷ ಬಿಡಲ್ಲ: ಬಿ.ಸಿ.ಪಾಟೀಲ್

Public TV
2 Min Read
BC PATIL

ಗದಗ: ಕಾಂಗ್ರೆಸ್‍ನವರೇ ಬಿಜೆಪಿಗೆ ಬರುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಸೇರುತ್ತಾರೆ ಎಂಬ ಕೈ ನಾಯಕರ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.

ನಗರದ ಪರಿಸರ ಲೇಔಟ್‍ನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಚೇರಿ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿ, ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವ್ಯಾಕೆ ಅಲ್ಲಿಗೆ ಹೋಗೋಣ. ಬಿಜೆಪಿ ಮನೆಗೆ ಸೊಸೆಯಾಗಿ ಬಂದು ಬಾಗಿಲಿಗೆ ಮೊಳೆ ಹೊಡೆದು ಮನೆಯ ಮಗಳಾಗಿದ್ದೇವೆ. ಹೀಗಾಗಿ ಮತ್ತೆ ಸಹಕರಿಸುವ ಪ್ರಶ್ನೆ ಇಲ್ಲ ಎಂದರು.

bjp - congress

ಕಾಂಗ್ರೆಸ್‍ನವರಿಗೆ ಬಿಜೆಪಿ ಮೇಲೆ ಅಷ್ಟ್ಯಾಕೆ ಮಮಕಾರ ಇದೆಯೋ ಗೊತ್ತಿಲ್ಲ. ಕಾಂಗ್ರೆಸ್‍ನ ತಳಪಾಯ ಕುಸಿತವಾಗಿರುವುದರಿಂದ ಬೇರೆ ಪಕ್ಷದವರನ್ನು ಕರೆತಂದು ಟಿಕೆಟ್ ನೀಡಲು ಹಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲು

ಇದೇ ವೇಳೆ ಸಚಿವ ಸಂಪುಟದ ಕುರಿತು ಮಾತನಾಡಿದ ಅವರು, 5 ಬೆರಳು ಒಂದೇ ಸಮನಾಗಿ ಇರುವುದಿಲ್ಲ. ಇನ್ನೂ ಐದು ಸಚಿವ ಸ್ಥಾನಗಳು ಖಾಲಿ ಇರುವುದರಿಂದ ಸಚಿವರಾಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಕೆಲವರು ಸಚಿವರಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

bc patil 1

ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುವುದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಈ ಬಗ್ಗೆ ಕೆಲವರು ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಪಕ್ಷದ ಹೈಕಮಾಂಡ್ ಯಾರನ್ನು ಮಾಡಬೇಕು ಎನ್ನುತ್ತೋ ಅವರು ಮಂತ್ರಿ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಿಮಗಾಗಿ ಆಸ್ತಿ ಮಾಡಿಲ್ಲ’ – ಹೆಂಡತಿಗೆ ಮರಣಪತ್ರ ಬರೆದು ಕಂದಾಯ ನೌಕರ ಆತ್ಮಹತ್ಯೆ

ಸಿಎಂ ಬದಲಾವಣೆಯಿಲ್ಲ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಸಿಎಂ ಬದಲಾವಣೆ ಸತ್ಯಕ್ಕೆ ದೂರವಾದ ಮಾತು. ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಹೇಳಿದಂತೆ 2023ರ ಚುನಾವಣೆವರೆಗೂ ಬಸವರಾಜ್ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.

bommai 7

ಬಸವರಾಜ್ ಬೊಮ್ಮಾಯಿ 6 ತಿಂಗಳವರೆಗೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಅವರಿಗೆ ಯಾರಾದರೂ ಬರೆದು ಕೊಟ್ಟಿದ್ದಾರಾ? ಎಂದು ಕಿಡಿಕಾರಿದ ಅವರು, ಕಾಂಗ್ರೆಸ್ ಅವರಿಗೆ ಸ್ವಪಕ್ಷದವರ ಮೇಲೆ ಅನುಮಾನವಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು

ರಾಜ್ಯದಲ್ಲಿ ಕಾಂಗ್ರೆಸ್ ಪತನ: ಕಾಂಗ್ರೆಸ್ ಕಾಲ ಕೆಳಗೆ ಹಳ್ಳ, ಹೊಳೆಗಳು ಹರಿಯುತ್ತಿದ್ದು, ಯಾವಾಗ ಕಾಲುಜಾರಿ ಬೀಳುತ್ತಾರೋ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಕಚ್ಚಾಟದಿಂದಾಗಿ ರಾಜ್ಯದಲ್ಲಿಯೂ ಕಾಂಗ್ರೆಸ್ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

SIDDU DKSHI

ರೇಣುಕಾಚಾರ್ಯ ಅವರು ಯಾವ ಸಚಿವರು ಸ್ಪಂದಿಸುತ್ತಿಲ್ಲ ಎನ್ನುತ್ತಿದ್ದಾರೆ. ಯತ್ನಾಳ್ ಅವರು ಎಲ್ಲಾ ಸಚಿವರು ಸ್ಪಂದಿಸುತ್ತಾರೆ ಎಂದು ಹೇಳುತ್ತಾರೆ. ಒಬ್ಬೊಬ್ಬರು ಒಂದೊಂದು ತರ ಹೇಳುತ್ತಿದ್ದು, ಅದು ಅವರ ಭಾವನೆ ಎಂದು ಹೇಳಿದರು.

RENUKACHARYA

ಗೊಂದಲ ಎಲ್ಲಾ ಕಡೆಗೂ ಇರುತ್ತದೆ. ಒಂದು ತಾಯಿಗೆ ಐದು ಮಕ್ಕಳಿದ್ದರೂ ಐದು ಮಕ್ಕಳು ಸರಿ ಇರುವುದಿಲ್ಲ. ರೇಣುಕಾಚಾರ್ಯ ಅವರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ, ಅದು ತಪ್ಪಲ್ಲ. ಆದರೆ ಮಂತ್ರಿ ಆಗಿಲ್ಲ ಎಂದು ಅಸಮಾಧಾನ ಇರಬಹುದು. ಹಾಗಾಗಿ ಹೀಗೆ ಹೇಳಿರಬಹುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *