ಹಾವೇರಿ: ಬೊಮ್ಮಾಯಿಯವರು ಸಿಎಂ ಆದಾಗಿನಿಂದ ಕಾಂಗ್ರೆಸ್‌ನವರು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil) ಕಿಡಿಕಾರಿದರು.
ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಬೊಮ್ಮಾಯಿಯವರು (Basavaraj Bommai) ಹೋಗಿ ಬಿಡುತ್ತಾರೆ. ಅವರನ್ನು ಮಂತ್ರಿ ಸ್ಥಾನದಿಂದ ತೆಗೆದು ಬಿಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬೊಮ್ಮಾಯಿಯವರ ಯಶಸ್ವಿಯಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದಾರೆ. ಬೊಮ್ಮಾಯಿ ಹದಿನೈದು ಗಂಟೆ ಕೆಲಸ ಮಾಡಿ ಜನಾನುರಾಗಿ ಸಿಎಂ ಆಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನವರಿಗೆ ಭಯ ಹುಟ್ಟಿದೆ ಎಂದು ಹೇಳಿದರು.
ಬೊಮ್ಮಾಯಿ, ಯಡಿಯೂರಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್‌ನವರು (Congress) ನಾವೆಲ್ಲಿ ಠೇವಣಿ ಕಳೆದುಕೊಳ್ತೇವೋ ಅನ್ನೋ ಭಯದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಅದು ನಾಚಿಕೆಗೇಡಿನ ಸಂಗತಿಯಾಗಿದೆ. ಸಂವಿಧಾನಾತ್ಮಕ ಸಿಎಂ ವಿರುದ್ಧ ಈ ರೀತಿ ಹೇಳೋದು ಸರಿಯಲ್ಲ. ಅವರೆಷ್ಟು ಸತ್ಯಹರಿಶ್ಚಂದ್ರರು ಅನ್ನೋ ಬಗ್ಗೆ ಅವರು ಆತ್ಮಮುಟ್ಟಿ ನೋಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: SIMI ಸಂಘಟನೆ ಹುಟ್ಟಿಕೊಂಡಿದ್ದೇ ವಿಜಯಪುರದಿಂದ: ಯತ್ನಾಳ್
ಮುಂಜಾಗ್ರತಾ ಕ್ರಮವಾಗಿ ಪಿಎಫ್‌ಐ (PFI) ಸಂಘಟನೆಯ ಮುಖಂಡರನ್ನು ಬಂಧಿಸುತ್ತಿದ್ದಾರೆ. ಮುಂದೆ ಆ ಸಂಘಟನೆಯನ್ನು ಬ್ಯಾನ್ ಮಾಡಬೇಕೋ ಏನೋ ಅನ್ನೋದರ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ. ದೇಶವನ್ನು ಉಳಿಸೋದು, ಶಾಂತಿ ಕಾಪಾಡೋದು ಬಹಳ ಮುಖ್ಯ. ಲಾಭ ನಷ್ಟದ ಬಗ್ಗೆ ಚಿಂತನೆ ಮಾಡೋ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: HALಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ: ದ್ರೌಪದಿ ಮುರ್ಮು