ಚಿತ್ರದುರ್ಗ:ಸತೀಶ್ ಜಾರಕಿಹೊಳಿ,ಭವಿಷ್ಯ ಹೇಳುವವರಾ ಅಥವಾ ಜ್ಯೋತಿಷಿನಾ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ವಿರೋಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕೀಹೊಳಿ ವಿರುದ್ಧವಾಗಿ ವಾಗ್ಧಾಳಿ ಮಾಡಿದ್ದರೆ.
ರಾಜ್ಯದ ಸಿಎಂ ಬೊಮ್ಮಾಯಿ ಇನ್ನು ಕೇವಲ 6ತಿಂಗಳ ಕಾಲ ಮಾತ್ರ ಸಿಎಂ ಅಂತಹೇಳಿರುವ ಸತೀಶ್ ಜಾರಕಿಹೊಳಿ ವಿರುದ್ಧ ಗರಂ ಆದ ಅವರು ಚಿತ್ರದುರ್ಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದರು. ಬಿಜೆಪಿ ಭವಿಷ್ಯ ಹಾಗೂ ಮುಂದಿನ ಆಗುಹೋಗುಗಳ ಬಗ್ಗೆ ಮಾತನಾಡುವ ಸತೀಶ್ ಜಾರಕಿಹೊಳಿ ಬಿಜೆಪಿ ಪಕ್ಷದ ವಕ್ತಾರನಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾಳೆಯಿಂದ ಥಿಯೇಟರ್ ಹೌಸ್ ಫುಲ್- ಸರ್ಕಾರದಿಂದ ಅನುಮತಿ
ಅಲ್ಲದೇ ಅವರೇನಾದರು ಭವಿಷ್ಯ ಹೇಳುವವರಾ ಅಥವಾ ಜ್ಯೋತಿಷಿನಾ? ಅವರಿಗೇನು ಗೊತ್ತು ನಮ್ಮ ಪಕ್ಷದಲ್ಲಿ ನಡೆಯುವ ಆಗುಹೋಗುಗಳ ಬಗ್ಹೆ ಅವರಿಗೇನು ಮಾಹಿತಿ ಇದೆ. ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸಲು ಈ ರೀತಿ ಪ್ರಯತ್ನಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಈಗಾಗ್ಲೇ ಕಾಂಗ್ರೆಸ್‍ಗೆ ಡಿವೋರ್ಸ್ ಕೊಟ್ಟಿದ್ದು, ಮತ್ತೆ ಹೋಗಲ್ಲ: ಬಿ.ಸಿ ಪಾಟೀಲ್
ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಪ್ರಯತ್ನ ಫಲಿಸಲ್ಲ. ವಿಪಕ್ಷ ಮುಖಂಡರು ಹೀಗೆ ಹೇಳುತ್ತಲೇ ಇರುತ್ತಾರೆ ಎಂದು ಹುಸಿನಗೆ ನಕ್ಕರು. ರಾಜ್ಯದ ಚುಕ್ಕಾಣಿ ಹಿಡಿದಿದ್ದ ಬಿಎಸ್‍ವೈ ಅವರ ರಾಜೀನಾಮೆ ವೇಳೆ ಸಹ ಈ ರೀತಿ ಗೊಂದಲ ಸೃಷ್ಟಿಸಿದ್ದರು. ಅದು ವಿಪಕ್ಷ ನಾಯಕರ ಹೇಳಿದ ಮೇಲೆ ಬಿಎಸ್‍ವೈ ರಾಜಿನಾಮೆ ನೀಡಿದ್ದಾರೆ ಎಂಬ ಭಾವ ಅವರಲ್ಲಿದೆ. ಆದರೆ ಬಿಎಸ್‍ವೈ ಅವರ ವಯಸ್ಸಿನ ಕಾರಣಕ್ಕೆ ಸ್ವಯಂ ರಾಜೀನಾಮೆ ನೀಡಿದ್ದೇನೆಂದು ಅವರೇ ಹೇಳಿದ್ದಾರೆ ಎಂದರು.
ರಾಜ್ಯದ ಸಂಪುಟ ವಿಸ್ತರಣೆ ವಿಚಾರ ಸಿಎಂ ಪರಮಾಧಿಕಾರ ಅವರು ಮಾಡಲಿ ಬಿಡಿ. ಸಂಪುಟ ವಿಸ್ತರಣೆ, ಬದಲಾವಣೆ ಸಿಎಂ ಪರಮಾಧಿಕಾರವಾಗಿದೆ. ಸಿಎಂ ದೆಹಲಿಗೆ ಯಾವ ಕಾರಣಕ್ಕೆ ಹೋಗುತ್ತಿದ್ದಾರೆಂದು ಗೊತ್ತಿಲ್ಲವೆಂದಿದ್ದಾರೆ.