ಚಿತ್ರದುರ್ಗ: ಕಾಂಗ್ರೆಸ್ ನವರಿಗೆ ಬಾರ್ ಗೊತ್ತಿಲ್ವಾ? ಯಾರೂ ಹೋಗೋದೆ ಇಲ್ವಾ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಬಳಿ ರೈತ ಬೆಳೆ ಸಮೀಕ್ಷೆ ಆಪ್ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಸಿ.ಟಿ.ರವಿ ಪರ ಧ್ವನಿ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್ ನವರಿಗೆ ಬಾರ್ ಗೊತ್ತಿಲ್ವಾ? ಯಾರೂ ಹೋಗೋದೆ ಇಲ್ವಾ ಎಂದು ಪ್ರಶ್ನಿಸಿದರು. ಅಲ್ಲದೆ ಈ ವಿಚಾರದಲ್ಲಿ ಮಾಜಿ ಸಿಎಂ ಆಗಿ ಸಿದ್ದರಾಮಯ್ಯ ಮಾತು ಸರಿಯಲ್ಲ. ಬಡವರ ಹಸಿವು ಹಾಗೂ ಇಂದಿರಾಗಾಂಧಿಯವರಿಗೆ ಸಂಬಂಧವೇನು? ಇಂದಿರಾ ಗಾಂಧಿ ದೊಡ್ಡವರು, ಪ್ರಧಾನಿ ಆಗಿದ್ದವರು ಅವರ ಬಗ್ಗೆ ನನಗೂ ಗೌರವವಿದೆ. ಆದರೆ ಬಿಜೆಪಿಯವರಿಗೆ ಬಾರ್ ನೆನಪಾಗುತ್ತದೆ ಎಂಬ ಹೋಲಿಕೆ ಸರಿಯಲ್ಲ ಎಂದು ಕಿಡಿ ಕಾರಿದರು.
Advertisement
Advertisement
ಈ ಸರ್ಕಾರದಲ್ಲಿ ಬಾಂಬೆ ಟೀಂ ಸೇರಿ ಯಾವುದೇ ಟೀಂ ಸಹ ಇಲ್ಲ. ಸರ್ಕಾರದಲ್ಲೀಗ ನಿರ್ಮಾಣವಾಗಿರುವ ಆನಂದ್ ಸಿಂಗ್ ಅಸಮಾಧಾನವನ್ನು ಸಿಎಂ ಬೊಮ್ಮಾಯಿ ಸರಿಪಡಿಸಿದ್ದಾರೆ.ಪ್ರತಿ ಇಲಾಖೆಯು ಸರ್ಕಾರದ ಇಲಾಖೆಗಳಾಗಿವೆ. ಯಾವುದನ್ನೂ ಹೆಚ್ಚು, ಕಡಿಮೆ ಅನ್ನಲಾಗದು. ಸರ್ಕಾರದ ಕೆಲಸ ದೇವರ ಕೆಲಸ ಅಂತ ನಾವು ಮಾಡುತಿದ್ದೇವೆ. ಅಲ್ಲದೇ ಒಂದೇ ತಾಯಿಯ ಮಕ್ಕಳಲ್ಲೇ ಭಿನ್ನಾಭಿಪ್ರಯಾಗಳು ಇರುತ್ತವೆ. ಅದನ್ನು ಸರಿಪಡಿಸುವುದು ತಾಯಿ, ತಂದೆಯರ ಕೆಲಸವಾಗಿದೆ ಎಂದರು. ಇದನ್ನೂ ಓದಿ: 83 ತಾಲೂಕುಗಳು ಪ್ರವಾಹಪೀಡಿತ ಎಂದು ಘೋಷಣೆ: ಆರ್.ಅಶೋಕ್
Advertisement
Advertisement
ಆಗ ನಾವು ಸಮ್ಮಿಶ್ರ ಸರ್ಕಾರವನ್ನು ತೆಗೆಯಬೇಕಿತ್ತು ಹೀಗಾಗಿ ಒಂದಾಗಿದ್ದೆವು. ಈಗ ಸರ್ಕಾರ ತೆಗೆದಾಗಿದೆ. ನೂತನ ಸರ್ಕಾರ ರಚನೆಯೂ ಆಗಿದೆ. ಈ ಸರ್ಕಾರದಲ್ಲಿ ಈಗಲೂ ಒಬ್ಬಿಬ್ಬರಿಗೆ ಬಿಟ್ಟರೆ ಯಾರಿಗೂ ಅನ್ಯಾಯವಾಗಿಲ್ಲ. ಸಂಪುಟದಲ್ಲಿ ಖಾತೆ ವಿಚಾರದಲ್ಲಿ ಕೆಲವರಿಗೆ ಅಸಮಾಧನವಿದೆ, ಅದನ್ನು ಸಿಎಂ ಬೊಮ್ಮಾಯಿ ಹಾಗೂ ಹೈಕಮಾಂಡ್ ಸರಿಪಡಿಸಲಿದೆ. ಇನ್ನು ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಸುಭದ್ರವಾಗಿದೆ, 2024ಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.