ಹಾವೇರಿ: ತಾವು ಮಾಡಿದ ತಪ್ಪಿಗೆ, ತಮ್ಮ ಅಕ್ರಮಕ್ಕೆ ಬಿಜೆಪಿ ಮೇಲೆಕೆ ಆಪಾದನೆ ಮಾಡುತ್ತಾರೆ. ಬಿಜೆಪಿ ಸೇರದವರನ್ನೆಲ್ಲ ಜೈಲಿಗೆ ಕಳಿಸೋಕೆ ಆಗಿದೆಯಾ? ಎಲುಬಿಲ್ಲದ ನಾಲಿಗೆ ಏನೋ ಮಾತನಾಡಿದರೆ ಜನರು ನಂಬುವಷ್ಟು ದಡ್ಡರಿಲ್ಲ, ಮಾತನಾಡಬೇಕಾದರೆ ಅರ್ಥ ಇಟ್ಕೊಂಡು ಮಾತಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಟಾಂಗ್‍ಕೊಟ್ಟಿದ್ದಾರೆ.
Advertisement
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆ ಇಲ್ಲ. ಕಳೆದ ಬಾರಿಯೂ ಇಲ್ಲಿ ಒಂದೇ ಅಭ್ಯರ್ಥಿ ಹಾಕಿದ್ದೇವು. ಈ ಬಾರಿಯೂ ಒಂದೇ ಅಭ್ಯರ್ಥಿ ಹಾಕಿದ್ದೇವೆ. ಪ್ರಧಾನಿ ಮೋದಿ ಗೋದ್ರಾ ಸಮಯದಲ್ಲಿದ್ದಂತಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಪ್ರತಿದಿನ ಸೂರ್ಯ ಹುಟ್ಟಿ ಸೂರ್ಯ ಮುಳುಗ್ತಾನೆ. ಬದಲಾವಣೆ ಸಹಜ. ಶತಮಾನ, ವಯಸ್ಸು, ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಹಿಂದೆ ಹೆಚ್ಚು ಕಡಿಮೆ ಇರಬಹುದು. ಇವತ್ತು ಬದಲಾವಣೆ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ
Advertisement
Advertisement
ದೇವೇಗೌಡರು ಪ್ರಧಾನಿಯವರನ್ನ ಹೊಗಳ್ತಾರೆ ಅಂದರೆ ಅದನ್ನ ಮೆಚ್ಚಬೇಕಾಗುತ್ತೆ. ಪ್ರಧಾನಿ ಮೋದಿಯವರು ಜಗತ್ತಿನ ಪ್ರಭಾವಿ ನಾಯಕರು. ಮಾಜಿ ಪ್ರಧಾನಿ ದೇವೇಗೌಡರು ಅನುಭವಿ ರಾಜಕಾರಣಿ. ಅವರು ಹೇಳಿದ್ದರಲ್ಲಿ ಅರ್ಥ ಇರುತ್ತೆ. ದೇವೇಗೌಡರು ವಾಸ್ತವಾಂಶವನ್ನೆ ಹೇಳಿದ್ದಾರೆ. ಹೊಂದಾಣಿಕೆಯನ್ನ ಯಾರೇ ಮಾಡಿಕೊಂಡರೂ ಅದು ಹೊಂದಾಣಿಕೆಯೆ. ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿ ಮತ್ತು ಜೆಡಿಎಸ್ ಅಥವಾ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಯಾರೇ ಹೊಂದಾಣಿಕೆ ಮಾಡಿಕೊಂಡರೂ ಅದು ಹೊಂದಾಣಿಕೆಯೆ. ಗಂಡ, ಹೆಂಡತಿ ಸರಿಯಾಗಿ ಸಂಸಾರ ಮಾಡಿಕೊಂಡು ಹೋದರೆ ಸಾಕು ಹೇಳಿದ್ದಾರೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು
Advertisement