– ಟಿಕೆಟ್ ಕೊಡದಿದ್ರೆ ನನಗೆ ನಂದೇ ಹಾದಿ ಇದೆ
ಹಾವೇರಿ: ಈ ಕ್ಷೇತ್ರದ ಲೋಕಸಭಾ ಟಿಕೆಟ್ ನನಗೆ ಕೊಡಬೇಕು, ನಾವು ತ್ಯಾಗ ಮಾಡಿ ಬಂದವರು ಎಂದು ಮಾಜಿ ಸಚಿವ ಬಿಸಿ ಪಾಟೀಲ್ (BC Patil) ಹೇಳಿದ್ದಾರೆ.
Advertisement
ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮನೆಯಲ್ಲಿ ಕೂತುಕೊಂಡಿದ್ದೇವೆ. ನಮಗೆ ಹೆದರಿಸೋದು ಬೆದರಿಸೋದು ಗೊತ್ತಿಲ್ಲ. ಸೈಲೆಂಟ್ ಆಗಿ ಇದ್ದೀವಿ ಎಂದರೆ ಅದು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ಈಗಾಗಲೇ ಬೊಮ್ಮಾಯಿ ಸಿಎಂ ಆಗಿದ್ದಾರೆ. ನಾನು ಹಾವೇರಿ (Haveri) ಹಾಗೂ ಗದಗ ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಮಾಜಿ ಕಾಂಗ್ರೆಸ್ ಶಾಸಕ ವಾಸು ಅನಾರೋಗ್ಯದಿಂದ ನಿಧನ
Advertisement
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಹಾಗೆಂದು ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವವನಲ್ಲ. ನನಗೆ ಕೊಡಬೇಕು ಎಂದು ವಾದ ಮಾಡುತ್ತಿದ್ದೇನೆ. ಸಿಗಲಿಲ್ಲ ಎಂದರೆ ಕಾರ್ಯಕರ್ತರ ಜೊತೆ ಮಾತಾನಾಡುತ್ತೇನೆ. ನನಗೆ ನಂದೇ ಹಾದಿ ಇದೆ. ಹೆಬ್ಬಾರ್, ಎಸ್.ಟಿ ಸೋಮಶೇಖರ್ ಹಾದಿ ಬೇಕಾಗಿಲ್ಲ ಎಂದಿದ್ದಾರೆ.
Advertisement
Advertisement
ಯಡಿಯೂರಪ್ಪನವರೇ ಕಾಂತೇಶ್ ಜೊತೆ ನಿಂತು ಗೆಲ್ಲಿಸಿಕೊಂಡು ಬರೋದಾಗಿ ಮಾತುಕೊಟ್ಟಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ, ಯಡಿಯೂರಪ್ಪನವರೇ ಆ ಮಾತು ಹೇಳಬೇಕಲ್ವಾ? ಅವರು ಹೇಳಿದರೆ ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತೆ. ನಮಗೆ ಯಾವ ರೀತಿನೂ ಯಡಿಯೂರಪ್ಪ ಅವರು ಹೇಳಿಲ್ಲ. ನಾನು ಸೋತಿದ್ದೀನಿ, ಅವಕಾಶ ಕೊಡಿ ಗೆಲ್ತೀನಿ ಎಂದು ಕೇಳಿದ್ದೇನೆ. ಕಾಂತೇಶ್‍ಗೆ ಟಿಕೆಟ್ ಕೊಟ್ಟರೆ ವಿಚಾರ ಮಾಡುತ್ತೇನೆ. ಕಾಂತೇಶ್ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ, ಕಾಂತೇಶ್‍ಗೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ.
ನಾನು ಎಲ್ಲಾ ಹೇಳಿದರೆ ನಿಮಗೆ ರುಚಿ ಉಳಿಯಲ್ಲ. ನಾನು ಎಚ್ಚರಿಕೆ ಕೊಡುತ್ತಿಲ್ಲ. ಒಬ್ಬ ಗ್ರಾಮ ಪಂಚಾಯತಿ ಸದಸ್ಯ ತನ್ನ ಸ್ಥಾನ ತ್ಯಾಗ ಮಾಡಲ್ಲ. ನಾವು ತ್ಯಾಗ ಮಾಡಿದ್ದೇವೆ. ನಮಗೆ ಟಿಕೆಟ್ ಕೊಡುವುದರಲ್ಲಿ ನ್ಯಾಯ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂತು. ಇನ್ನೂ 2023ರಲ್ಲಿ ಬಿಜೆಪಿ ಸೋತಿದೆ. ನಾವೆಲ್ಲಾ ಸೋತಿದ್ದೇವೆ, ಈಗ ನಮ್ಮ ಹಿತವನ್ನೂ ಅವರು ಕಾಯಲಿ. ಆ ಜವಾಬ್ದಾರಿ ಅವರಿಗೆ ಇದೆ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಳ್ಳಾರಿಯಲ್ಲಿ ತನಿಖೆ ಚುರುಕು, ಬಾಂಬರ್‌ನಂತೆ ಡ್ರೆಸ್ ಹಾಕಿ ಓರ್ವನ ವಿಚಾರಣೆ