-ಪಕ್ಷದಲ್ಲಿ ಸಿದ್ದರಾಮಯ್ಯರ ಮಾತಿಗೆ ಬೆಲೆ ಇಲ್ಲ
ಬೆಂಗಳೂರು: ಒಂದು ಸಾರಿ ಚಾನ್ಸ್ ಕೊಡಬಹುದು. ಆದರೆ ಎಷ್ಟು ಸಲ ಅಂತ ನಾವು ಮೋಸ ಹೋಗುವುದು. ಇದು ಮೂರನೇ ಬಾರಿ ಸಚಿವ ಸ್ಥಾನ ಕೊಡುತ್ತೀನಿ ಎಂದು ಹೇಳಿ ಮೋಸ ಮಾಡಿರುವುದು. ಹೀಗಾಗಿ ಮತ್ತೆ ಮತ್ತೆ ಚಾನ್ಸ್ ಕೊಡುವುದಕ್ಕೆ ಯಾರೂ ಮೂರ್ಖರಲ್ಲ ಎಂದು ಹೀರೆಕೆರೂರು ಶಾಸಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಕೈ ಹೈಕಮಾಂಡ್ ಮೇಲೆ ಗರಂ ಆಗಿದ್ದಾರೆ.
ದೂರವಾಣಿ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೃಷ್ಟಿ ಪಾಟೀಲ್, ಮೂರನೇ ಬಾರಿಯೂ ಕೊಡುತ್ತೀನಿ ಎಂದು ಕತ್ತು ಕೂಯ್ದಂಗೆ ಆಗಿದೆ. ಹೀಗಾಗಿ ಅವರು ತುಂಬಾ ಬೇಸರದಿಂದ ಇದ್ದಾರೆ. ಈ ಬಾರಿ ನಾವೇನೂ ಕೇಳಿಕೊಂಡು ಹೋಗಿರಲಿಲ್ಲ. ಸಿದ್ದರಾಮಯ್ಯ ಅವರೇ ನಮ್ಮ ಪರವಾಗಿದ್ದು, ಮಂತ್ರಿ ಸ್ಥಾನ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯನವರ ಮಾತಿಗೆ ಪಕ್ಷದಲ್ಲಿ ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭರವಸೆ ಕೊಟ್ಟು ಹಿಂದೆ ತಳ್ಳುತ್ತಾ ಇದ್ದಾರೆ. ಕಾಣದ ಕೈವಾಡ ಇಲ್ಲದಿದ್ದರೂ ಪಕ್ಷದ ಒಳಗಡೆ ಏನೋ ನಡೆಯುತ್ತಿದೆ. ಇದು ಮೂರನೇ ಬಾರಿ ಸಚಿವ ಸ್ಥಾನ ಕೊಡುತ್ತೀನಿ ಎಂದು ಹೇಳಿ ಮೋಸ ಮಾಡಿರುವುದು. ಒಂದು ಸಾರಿ ಚಾನ್ಸ್ ಕೊಡಬಹುದು. ಆದರೆ ಎಷ್ಟು ಸಲ ಅಂತ ನಾವು ಮೋಸ ಹೋಗುವುದು. ಮತ್ತೆ ಮತ್ತೆ ಚಾನ್ಸ್ ಕೊಡುವುದಕ್ಕೆ ಯಾರೂ ಮೂರ್ಖರಲ್ಲ. ಎಂಪಿ ಎಲೆಕ್ಷನ್‍ನಲ್ಲೂ ನಾವೂ ಕಷ್ಟ ಪಟ್ಟರೂ ಅಷ್ಟೊಂದು ಫಲಿತಾಂಶ ಬಂದಿಲ್ಲ. ಅದನ್ನಾದರೂ ಪಕ್ಷದ ಮುಖಂಡರು ನೋಡಿ ಪಕ್ಷ ಬೆಳೆಸಬೇಕು ಅಂತಿದ್ದರೆ ತೀರ್ಮಾನ ಮಾಡಬೇಕಿತ್ತು. ಆದರೆ ಪಕ್ಷ ಬೆಳೆಸಬೇಕಾ, ಬೆಳೆಸಲು ಅವರೇ ಬಿಡುತ್ತಿಲ್ಲವಾ ಎಂಬ ಪ್ರಶ್ನೆ ಮೂಡಿದೆ ಎಂದರು.
ನಮ್ಮ ಕ್ಷೇತ್ರದಲ್ಲಿ 48 ವರ್ಷದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಗೆದ್ದಿದೆ. ಹೀಗಾಗಿ ಕಷ್ಟ ಪಟ್ಟಿದ್ದಾರೆ ಎಂದು ಅವರಿಗೆ ಬೆಲೆನೂ ಕೊಟ್ಟಿಲ್ಲ. ಅಭಿವೃದ್ಧಿ ಯಾರು ಮಾಡುತ್ತಾರೆ, ಯಾರು ಮುಂದೆ ಬೆಳೆಯುತ್ತಾರೋ ಅವರನ್ನು ತುಳಿಯುವ ಕೆಲಸ ಮಾಡುತ್ತಿದೆ. ಪಕ್ಷೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಪಕ್ಷದ ಭವಿಷ್ಯವನ್ನು ಅವರೇ ತೀರ್ಮಾನ ಮಾಡುತ್ತಿದ್ದಾರೆ. ತಂದೆ ಕ್ಷೇತ್ರದ ಜನತೆಯೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸೃಷ್ಠಿ ಪಾಟೀಲ್ ತಿಳಿಸಿದರು.