– ಮಕ್ಕಳಲ್ಲಿ ಕೋವಿಡ್ ರಕ್ಷಣೆ ಬಗ್ಗೆ ಸ್ವಯಂ ಜಾಗೃತಿ ಮೂಡಿಸಿದ ಸಚಿವ
ಹಾವೇರಿ: ಶಿಕ್ಷಕರು ನೋಡುತ್ತಾರೆ ಬೈಯುತ್ತಾರೆ ಎಂಬ ಕಾರಣಕ್ಕಾಗಿ ಮಕ್ಕಳು ಶಾಲೆಯಲ್ಲಿ ಮಾಸ್ಕ್ ಧರಿಸದೇ ನಿಮ್ಮ ಆರೋಗ್ಯಕ್ಕಾಗಿ, ಸಮಾಜದ ಆರೋಗ್ಯಕ್ಕಾಗಿ ಮಾಸ್ಕ್ ಧರಿಸಬೇಕು ಎಂಬ ಜಾಗೃತಿ ಮಕ್ಕಳಲ್ಲಿ ಸ್ವಯಂಜಾಗೃತವಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
Advertisement
ಇಂದಿನಿಂದ ರಾಜ್ಯ ಸರ್ಕಾರ 9 ರಿಂದ 12 ನೇ ತರಗತಿಯ ಮಕ್ಕಳಿಗೆ ಭೌತಿಕವಾಗಿ ಶಾಲೆ ಆರಂಭಿಸಿದ್ದು, ಈ ಹಿನ್ನಲೆಯಲ್ಲಿ ಮತಕ್ಷೇತ್ರ ಹಿರೇಕೆರೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, ಕೌರವ ಶಿಕ್ಷಣ ಸಂಸ್ಥೆ ಬಾಳೆಂಬಿಡ, ಸಿಇಸ್ ವಿದ್ಯಾ ಸಂಸ್ಥೆಗೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಭೇಟಿ ನೀಡಿ ಶಾಲಾ ಸಿದ್ಧತೆ, ಮಕ್ಕಳ ಸುರಕ್ಷತೆ ಬಗ್ಗೆ ಬಿ.ಸಿ.ಪಾಟೀಲ್, ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಶಾಲೆಗೆ ಆಗಮಿಸಿದ ಸಚಿವ ಸುಧಾಕರ್‌ಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು
Advertisement
ಇಂದು ರಾಜ್ಯದಲ್ಲಿ 9, 10ನೇ ತರಗತಿ ಹಾಗೂ ಪದವಿಪೂರ್ವ ತರಗತಿಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದೆನು.#ಮರಳಿಶಾಲೆಗೆ | #Haveri | #Hirekerur | @BCNagesh_bjp | @CMofKarnataka | @BSBommai | @DDChandanaNews pic.twitter.com/kDlccLOu3W
— Kourava B.C.Patil (@bcpatilkourava) August 23, 2021
Advertisement
ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಇನ್ನೂ ಹೋಗಿಲ್ಲ, ಮೂರನೇ ಅಲೆ ಬರಲಿ ಬಿಡಲೀ ಜೀವ ಮತ್ತು ಜೀವನ ಮುಖ್ಯ. ಕೊರೊನಾ ಜೊತೆಗೆ ಬದುಕಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಮಕ್ಕಳು ಶಿಕ್ಷಣದಿಂದ ಬಹಳಷ್ಟು ದಿನ ವಂಚಿತರಾಗಬಾರದು ಎಂಬ ಸದುದ್ದೇಶದೊಂದಿಗೆ ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗಳನ್ನು ಆರಂಭಿಸಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ತರಗತಿಗಳನ್ನು ಆರಂಭಿಸುವ ಚಿಂತನೆ ಇದೆ ಎಂದರು. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ
Advertisement
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರದ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿದ ಬಿ.ಸಿ.ಪಾಟೀಲ್, ಯಾರಿಗಾದರೂ ಜ್ವರ, ಶೀತದ ಲಕ್ಷಣ ಕೆಮ್ಮು ಕಂಡುಬಂದಲ್ಲಿ ತುರ್ತಾಗಿ ವೈದ್ಯರಲ್ಲಿ ತಪಾಸಣೆ ನಡೆಸಬೇಕು. ಮಕ್ಕಳೊಂದಿಗೆ ಶಿಕ್ಷಕರು ಸಹ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.