ತುಮಕೂರು: ತೆಂಗಿನ ರೋಗಕ್ಕೆ ತಗುಲಿರುವ ವಿವಿಧ ಬಗೆಯ ರೋಗಗಳನ್ನು ತಡೆಗಟ್ಟುವ ಸಲುವಾಗಿ ಪರೋಪ ಜೀವಿಗಳ ಉತ್ಪಾದನಾ ಕೇಂದ್ರವನ್ನು ತಿಪಟೂರು ತಾಲೂಕಿನಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ದೊಡ್ಡ ಪ್ರಮಾಣದ ಪರೋಪ ಜೀವಿಗಳ ಉತ್ಪಾದನಾ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದ ಅವರು, ಇತ್ತೀಚಿನ ದಿನದಲ್ಲಿ ತೆಂಗು ಬೆಳೆಯಲ್ಲಿ ಬಿಳಿನೊಣದ ಹಾವಳಿ ಹೆಚ್ಚಾಗಿದೆ. ಹಿಂದೆ ಇದ್ದಂತಹ ಕಪ್ಪು ತಲೆ ಹುಳಕ್ಕಿಂತ ವಿಭಿನ್ನವಾಗಿದ್ದು ಫಸಲಿಗೆ, ಮರಕ್ಕೆ ತೊಂದರೆ ನೀಡುತ್ತಿದೆ. ಇದನ್ನು ತಡೆಗಟ್ಟಲು ಇಸರಿಯಾ ಪ್ಯೂಮೋಸೋರೋಸಿಯಾ ಪ್ರಬಲ ಜೈವಿಕ ನಿಯಂತ್ರಕ ಶಿಲೀಂಧ್ರವನ್ನು ಕಂಡು ಹಿಡಿಯಲಾಗಿದೆ. ಅದರ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಿದ್ದು, ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್
Advertisement
Advertisement
ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕ ಬಿ.ರಘು, ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ವಿಜಯ, ಪರೋಪ ಜೀವಿಗಳ ಉತ್ಪಾದನಾ ಕೇಂದ್ರದ ಅಧಿಕಾರಿ ಡಾ.ನವೀನ್ ಕುಮಾರ್, ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೊಹನ್, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆರೆಗೋಡಿ ದೇವರಾಜು, ಕೆ.ವಿ.ಕೆ. ಕೊನೆಹಳ್ಳಿ ಕೇಂದ್ರದ ವಿಜ್ಞಾನಿ ಡಾ.ಶ್ರೀನಿವಾಸ್, ತೋಟಗಾರಿಕೆ ಇಲಾಖೆಯ ರೂಪ ಇದ್ದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ