ಬೆಂಗಳೂರು: ನಿಗದಿತ ಸಮಯಕ್ಕೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪಬ್ಲಿಕ್ ಪರೀಕ್ಷೆಗಳು ನಡೆಯುವುದರ ಜೊತೆಗೆ ಹಳೆ ಮಾದರಿಯಲ್ಲಿ ಈ ಬಾರಿ ಪರೀಕ್ಷೆ ನಡೆಯುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಇಲಾಖೆ ಮಾಡಿಕೊಂಡಿದೆ. ಒಂದು ವೇಳೆ ಪರೀಕ್ಷಾ ಸಮಯದಲ್ಲಿ ಕೋವಿಡ್ ಹೆಚ್ಚಳ ಆದರೆ ಮಾತ್ರ ಎಕ್ಸಾಂ ಮುಂದೂಡಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದರು.
Advertisement
Advertisement
ಈಗ ಬೆಂಗಳೂರಿನಲ್ಲಿ ಮಾತ್ರ ಶಾಲೆಯನ್ನು ಬಂದ್ ಮಾಡಲಾಗಿದೆ. ಅವಶ್ಯಕತೆ ಬಿದ್ದರೆ ಮುಂದಿನ ಸ್ಥಿತಿ ನೋಡಿಕೊಂಡು ಶಾಲೆ ಬಂದ್ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದ ಅವರು, ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಡಿಸಿ ಮತ್ತು ತಹಶೀಲ್ದಾರ್ ಹಾಗೂ ಜಿಲ್ಲಾ ಮಂತ್ರಿಗಳ ಜೊತೆ ಚರ್ಚಿಸಿ ಶಾಲೆಗೆ ರಜೆ ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಜೊತೆಗೆ ತಾಲೂಕು ಹಂತದಲ್ಲಿ ಸೋಂಕು ನೋಡಿಕೊಂಡು ರಜೆ ನೀಡುವ ನಿರ್ಧಾರ ಮಾಡಿ ಎಂದು ತಹಶೀಲ್ದಾರ್ ಗೆ ತಿಳಿಸಿದ್ದೇವೆ ಎಂದರು.
Advertisement
Advertisement
ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪಠ್ಯ ಬೋಧನೆ ಮಾಡುತ್ತೇವೆ. ಜೊತೆಗೆ ರಜೆ ವಿಸ್ತರಣೆ ಆದರೆ ವಿದ್ಯಾಗಮ, ಚಂದನದ ಮೂಲಕ ಪಠ್ಯ ಬೋಧನೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!
ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶಿಕ್ಷಣ ಸಚಿವ ಬಿ.ಸಿ. ಬಿಸಿ ನಾಗೇಶ್ ಸಂಪೂರ್ಣ ಗುಣಮುಖರಾಗಿದ್ದಾರೆ. ಶಿಕ್ಷಣ ಇಲಾಖೆ ಕೆಲಸಗಳನ್ನು ಮತ್ತೆ ಪ್ರಾರಂಭ ಮಾಡಿದ್ದಾರೆ. ಕೊರೊನಾ ಸೋಂಕು ದೃಢವಾಗಿದ್ದರಿಂದ ಕಳೆದ 8 ದಿನಗಳಿಂದ ಐಸೋಲೇಷನ್‍ನಲ್ಲಿದ್ದರು. ಇದನ್ನೂ ಓದಿ: ಆಸ್ಕರ್ ವಿಜೇತ ಮೊದಲ ಕಪ್ಪುವರ್ಣೀಯ ಸಿಡ್ನಿ ಪೊಯ್ಟಿಯರ್ ನಿಧನ