ಬೀದರ್: ಆರ್‌ಎಸ್‍ಎಸ್ (RSS) 1925 ರಿಂದ ಇದ್ದು ಹಲವಾರು ದೇಶ ಭಕ್ತರನ್ನು ಸೃಷ್ಟಿಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (B.C. Nagesh) ಹೇಳಿದ್ದಾರೆ.
ಆರ್‌ಎಸ್‍ಎಸ್‍ನವರು ಬೀದಿನಾಯಿ ಇದ್ದಂತೆ ಎಂದು ಎಸ್‍ಡಿಪಿಐ (SDPI) ಮುಖಂಡರ ಉದ್ಟತನದ ಹೇಳಿಕೆಗೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‍ಎಸ್ – 1925 ರಿಂದ ಇದ್ದು, ಹಲವಾರು ದೇಶ ಭಕ್ತರನ್ನು ಸೃಷ್ಟಿಸಿದೆ ಎಂದರು. ಇದನ್ನೂ ಓದಿ: 10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ
- Advertisement
ರಾಜ್ಯದಲ್ಲಿ ಯಾರು ಏನು ಮಾಡಿದ್ದಾರೆ ಅಂತ ರಾಜ್ಯದ ಜನರಿಗೆ ಗೊತ್ತಿದ್ದು ಗಂಭೀರ ಆರೋಪಗಳು ಕೇಳಿ ಬಂದಾಗ ನಮ್ಮ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ
- Advertisement
2015-16 ರಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ. ಹೀಗಾಗಿ ಶಿಕ್ಷಕರು ಹಾಗೂ ಶಾಲಾ ಕೊಠಡಿಗಳ ಸಮಸ್ಯೆಯಾಗಿದೆ. ಈ ವರ್ಷ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದ್ದು ಎರಡು ತಿಂಗಳಲ್ಲಿ ಎಲ್ಲಾ ಶಿಕ್ಷಕರ ನೇಮಕಾತಿಯನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.