ಮಡಿಕೇರಿ: ಹಲಾಲ್ ಎಂಬುದು ಒಂದು ಧಾರ್ಮಿಕ ಆಚರಣೆಯಾಗಿದೆ. ಇದು ಸರ್ಕಾರದ ನಿಯಮವೇನು ಅಲ್ಲ. ಇದರಿಂದಾಗಿ ಸರ್ಕಾರ ಹಲಾಲ್ ವಿಚಾರದಲ್ಲಿ ಮೂಗು ತೋರಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಎಂಬುದು ಒಂದು ಧಾರ್ಮಿಕ ಆಚರಣೆಯಾಗಿದೆ. ಅದು ನಿನ್ನೆ ಮೊನ್ನೆವರೆಗೆ ಯಾರಿಗೂ ಗೊತ್ತಿರಲಿಲ್ಲ. ಇದು ಸರ್ಕಾರದ ನಿಯಮವೇನು ಅಲ್ಲ. ಈ ವಿಷಯದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಎಂದರು.
Advertisement
Advertisement
ಹಲಾಲ್‍ನ್ನು ಇಷ್ಟವಿದ್ದವರು ಅಂಗಡಿಗಳಲ್ಲಿ ಸ್ವೀಕರಿಸುತ್ತಾರೆ. ಇಷ್ಟವಿಲ್ಲದವರು ಬೇರೆ ಅಂಗಡಿಗಳಲ್ಲಿ ಕೊಳ್ಳುತ್ತಾರೆ. ಇದನ್ನು ಜನರೇ ಮಾಡಿಕೊಂಡಿದ್ದಾರೆ ವಿನಃ ನಾವು ಮಾಡಿದ್ದಲ್ಲ. ಈ ವಿಷಯವನ್ನು ಜನರು ಎತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ವಿಷಯವನ್ನು ಎತ್ತುವ ಅಧಿಕಾರವಿದೆ. ಈ ವಿಷಯವನ್ನು ಸರ್ಕಾರವಾಗಲೀ, ಯಾವುದೇ ರಾಜಕೀಯ ಪಕ್ಷವಾಗಲೀ ಎತ್ತಿಲ್ಲ ಎಂದರು. ಇದನ್ನೂ ಓದಿ: ನಾಳೆ ಚಿಕ್ಕಬಳ್ಳಾಪುರಕ್ಕೆ ಅಮಿತ್ ಶಾ ಭೇಟಿ – ಪೊಲೀಸರಿಂದ ಬಿಗಿ ಬಂದೋಬಸ್ತ್
Advertisement
Advertisement
ನಂತರ ಅವರು ಜನಸಾಮಾನ್ಯರಂತೆ ಬೇಕರಿಯಲ್ಲಿ ಕಾಫಿ ಸವಿದು, ಜನರೊಂದಿಗೆ ಸರಳತೆಯನ್ನು ಮೆರೆದಿದ್ದಾರೆ. ಈ ಬಗ್ಗೆ ಮಾತನಾಡಿ, ಕೊಡಗು ಅಂದರೆ ನೆನಪು ಆಗೋದು ಕಾಫಿ. ಮಡಿಕೇರಿ ನಗರದಲ್ಲಿ ಇರುವ ಆನಂದ್ ಬೇಕರಿಯಲ್ಲಿ ಉತ್ತಮ ಕಾಫಿ ಸವಿದೆ. ದಿನವಿಡೀ ಸ್ಪೂರ್ತಿ ನೀಡಲು ಕಾಫಿ ಸವಿದೆ ಎಂದರು. ಕೊಡಗಿನ ಶಾಸಕ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ಜಿಲ್ಲಾಧಿಕಾರಿ ಸತೀಶ್ ಸಾಥ್ ನೀಡಿದರು. ಇದನ್ನೂ ಓದಿ: ಸಂಧ್ಯಾರತಿ ಉಳಿಸಿಕೊಂಡು ಸಲಾಂ ಕೈ ಬಿಡಬೇಕು – ಮೇಲುಕೋಟೆ ಸ್ಥಾನಿಕರಿಂದ ಮನವಿ