ಮಡಿಕೇರಿ: ಮಡಿಕೇರಿಯ (Madikeri) ಕೆ. ನಿಡುಗಡೆಯಲ್ಲಿ ನಿರ್ಮಾಣವಾಗಿರುವ ನೂತನ ಸರ್ಕಾರಿ ಜಿಲ್ಲಾ ಗೋಶಾಲೆಯನ್ನು (Cowshed) ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ (BC Nagesh) ಉದ್ಘಾಟಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಜಿಲ್ಲಾ ಪ್ರಾಣಿದಯಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಗೋಶಾಲೆಯನ್ನು ಸಚಿವ ಬಿ.ಸಿ ನಾಗೇಶ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು(Inauguration) .
Advertisement
Advertisement
ಸುಮಾರು 8 ಎಕರೆ ಜಾಗದಲ್ಲಿ, 53 ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಿದೆ. ರಾಜ್ಯದ 2ನೇ ಸರ್ಕಾರಿ ಗೋ ಶಾಲೆ ಇದಾಗಿದ್ದು, 50ಕ್ಕೂ ಹೆಚ್ಚು ಜಾನುವಾರುಗಳನ್ನು ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ RSS ಕೈಗೊಂಬೆ- ಸಿದ್ದರಾಮಯ್ಯ ವಾಗ್ದಾಳಿ
Advertisement
ಕೊಡಗಿನ ಇಬ್ಬರು ಶಾಸಕರ ಪ್ರಯತ್ನದ ಫಲವಾಗಿ ಇಂದು ಅದು ನೆರವೇರಿದೆ. ಸದ್ಯ ಜಿಲ್ಲೆಯ ಮಡಿಕೇರಿಯಲ್ಲಿ ಮಾತ್ರ ಗೋ ಶಾಲೆಯನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲೂ ಗೋ ಶಾಲೆ ತೆರೆಯುವ ಆಲೋಚನೆ ಇದೆ. ಬ್ರಿಟಿಷರ ಕಾಲದಿಂದಲೇ ಕೊಡಗಿನಲ್ಲಿ ಗೋ ಹತ್ಯೆ ನಿಷೇಧವಿದೆ. ಹೀಗಾಗಿ ಗೋವುಗಳನ್ನು ರಕ್ಷಿಸುವ ಉದ್ದೇಶದಿಂದ ಇದೀಗ ಮಡಿಕೇರಿಯಲ್ಲಿ ಗೋ ಶಾಲೆಯನ್ನು ತೆರೆಯಲಾಗಿದೆ ಎಂದು ಬಿ.ಸಿ ನಾಗೇಶ್ ತಿಳಿಸಿದರು.
Advertisement
ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ಎಂ.ಎಲ್.ಸಿ ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು. ಇದನ್ನೂ ಓದಿ: ಅ.13 ರಿಂದ 27ರವರೆಗೆ ಹಾಸನಾಂಬ ಜಾತ್ರೆ – ದೇವಿಯ ಆಭರಣ, ಖಜಾನೆಯಿಂದ ದೇಗುಲಕ್ಕೆ ಆಗಮನ