ಬೆಂಗಳೂರು: ಬಿಬಿಎಂಪಿ (BBMP) ವಿಶ್ವಗುರು ಬಸವಣ್ಣರನ್ನೇ (Basavanna) ಕತ್ತಲೆಗೆ ದೂಡಿದೆ. ಸರಿಯಾದ ನಿರ್ವಹಣೆ ಇಲ್ಲದೆ ಪುತ್ಥಳಿಯ ಕೆಲವು ಕಡೆ ಬಣ್ಣ ಉದುರುತ್ತಿದ್ದು, ಬಿಬಿಎಂಪಿ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಜಗತ್ತಿಗೆ ಮಾನವತೆ ಸಂದೇಶ ಸಾರಿದ ಮಹಾನ್ ವ್ಯಕ್ತಿ ಬಸವಣ್ಣ. ರಾಜ್ಯ ಮಾತ್ರ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾನ್ ನಾಯಕರಿಗೆ ನೀಡುವ ಗೌರವ ನಮ್ಮೆಲ್ಲರಿಗೂ ಹೆಮ್ಮೆ. ಆದರೆ ನಮ್ಮ ನೆಲದಲ್ಲೇ ಈ ಮಹಾನ್ ಶಕ್ತಿಯನ್ನು ಬಿಬಿಎಂಪಿ ಕತ್ತಲೆಗೆ ತಳ್ಳಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಬಸವಣ್ಣನವರ ಪುತ್ಥಳಿಯಲ್ಲಿ ಬಣ್ಣಗಳು ಉದುರುತ್ತಿದ್ದು, ಬಿಬಿಎಂಪಿ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್ ಜಾಮ್!
Advertisement
Advertisement
ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಬಸವಣ್ಣನ ಪ್ರತಿಮೆ ದುಸ್ಥಿತಿಯಾಗಿದೆ. 2020ರಲ್ಲಿ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಗರದ ಚಾಲುಕ್ಯ ಸರ್ಕಲ್‌ನಲ್ಲಿ ಬಸವಣ್ಣನ ಕಂಚಿನ ಪುತ್ಥಳಿ ಸ್ಥಾಪಿಸಲಾಗಿತ್ತು. ಆದರೆ ಪ್ರತಿಮೆ ನಿರ್ವಹಣೆ 4 ವರ್ಷಕ್ಕೆ ಬಿಬಿಎಂಪಿಗೆ ಸಾಕಾದಂತಿದೆ. ಅನೇಕ ದಿನಗಳಿಂದ ಈ ಪ್ರತಿಮೆ ಸುತ್ತ ಲೈಟ್‌ಗಳು ಉರಿಯುತ್ತಿಲ್ಲ. ಜೊತೆಗೆ ಇದರ ಕಾವಲಿಗಾಗಿ ಹಾಕಿದ್ದ ಸಿಸಿ ಕ್ಯಾಮರಾಗಳು ಕೂಡ ಕೆಲಸ ನಿಲ್ಲಿಸಿವೆ. ಜನರಿಗೆ ಬಸವಣ್ಣನವರ ತತ್ವ ಸಿದ್ಧಾಂತಗಳ ಜ್ಞಾನ ಸಾರುವ ಸಲುವಾಗಿಯೇ ಈ ಪುತ್ಥಳಿಯ ಸುತ್ತ ಗೋಡೆಗಳಲ್ಲಿ ಅವರ ಸಾಧನೆಗಳನ್ನೆ ಮೂಡಿಸಿ, ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿತ್ತು. ಈಗ ಲೈಟ್‌ಗಳು ಇಲ್ಲದ ಕಾರಣ ಕತ್ತಲೆ ಕವಿದ ಹಿನ್ನೆಲೆ, ರಾತ್ರಿಯಾದರೆ ಇಲ್ಲಿ ಪುತ್ಥಳಿ ಇದೆ ಅನ್ನೋದೇ ಕಾಣದಂತಾಗಿದೆ. ಹೀಗಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದು ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡುತ್ತಿಲ್ಲ. ಇದನ್ನೂ ಓದಿ: ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ