ಬೆಂಗಳೂರು: ಇನ್ನುಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಎಂಜಿನಿಯರ್‌ಗಳ ಸಂಬಳವನ್ನೇ ಕಟ್ ಮಾಡಲು ಬಿಬಿಎಂಪಿ(BBMP) ಮುಂದಾಗಿದೆ.
ಹೌದು. ಅನುಮತಿ ಇಲ್ಲದೇ ರಸ್ತೆ ಅಗೆಯಲು ಅವಕಾಶ ಕೊಟ್ಟರೆ ವಾರ್ಡ್ ಎಂಜಿನಿಯರ್‌ಗಳ ಸಂಬಳ(Ward Engineer Salary) ಕಡಿತ ಮಾಡುವುದಾಗಿ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾಲಿಕೆ ಅನುಮತಿ ಇಲ್ಲದೇ ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿಯವರು ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಅಗೆದಿರುವ ರಸ್ತೆ ಸರಿಪಡಿಸಬೇಕು. ಅನುಮತಿ ಇಲ್ಲದೇ ರಸ್ತೆ ಅಗೆಯುವುದಕ್ಕೆ ಅವಕಾಶ ಕೊಡಬಾರದು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗು ಎಂದ ಯುವತಿಯನ್ನು ಮನಬಂದಂತೆ ಥಳಿಸಿದ ಯುವಕನ ಮನೆಗೆ ನುಗ್ಗಿತು ಬುಲ್ಡೋಜರ್
ರಸ್ತೆ ಅಗೆತದ ಬಗ್ಗೆ ಪಾಲಿಕೆಗೆ ಸಾಲು ಸಾಲು ದೂರು ದಾಖಲಾದ ಹಿನ್ನೆಲೆಯಲ್ಲಿ ಎಂಜಿನಿಯರ್ ಗಳ ವಿರುದ್ಧ ಸಂಬಳ ಕಟ್ ಮಾಡುವ ಅಸ್ತ್ರ ಪ್ರಯೋಗಕ್ಕೆ ಈಗ ಬಿಬಿಎಂಪಿ ಮುಂದಾಗಿದೆ.