ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ರಸ್ತೆ ಗುಂಡಿಗಳದೇ (Potholes) ಕಾರುಬಾರು. ರಸ್ತೆ (Road) ಗುಂಡಿ ಹೆಸರಲ್ಲಿ ಪ್ರತಿ ವರ್ಷ ಕೋಟಿ, ಕೋಟಿ ರೂ. ಲೂಟಿ ಮಾಡಲಾಗುತ್ತಿದೆ. ಇದೀಗ ಈ ಕೋಟಿ ಗುಂಡಿ ಅಡ್ಡ ದಾರಿ ತಪ್ಪಿಸಲು ಪಾಲಿಕೆ ಹೊಸ ದಾರಿ ಹಿಡಿದಿದೆ.
Advertisement
ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಬರೀ ವಂಚನೆ ಮಾಡುವುದೇ ದೊಡ್ಡ ದಂಧೆ ಮಾಡಿಕೊಂಡಿದೆ. ಅಡ್ಡರಸ್ತೆ, ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚಿದ್ದೀವಿ ಅಂತಾ ಲೆಕ್ಕ ಕೊಟ್ಟು ಕಾಲ ತಳ್ಳುತ್ತಿದೆ. ಈ ಸಮಸ್ಯೆ ತಪ್ಪಿಸಲು ಈಗ ಪಾಲಿಕೆ ಹೊಸ ದಾರಿ ಹಿಡಿದಿದ್ದು, ಆ್ಯಪ್ (App) ಲೆಕ್ಕಾಚಾರದ ಮೂಲಕ ಗುಂಡಿ ಮುಚ್ಚಲು ಪಾಲಿಗೆ ಮುಂದಾಗಿದೆ. ಇದನ್ನೂ ಓದಿ: ಇಂದು ರಾಷ್ಟ್ರಪತಿಗಳಿಂದ ಮೈಸೂರು ದಸರಾ ಉದ್ಘಾಟನೆ – ಏನೇನು ಕಾರ್ಯಕ್ರಮ ನಡೆಯಲಿದೆ?
Advertisement
Advertisement
ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ (Fixmy Street App) ಮೂಲಕ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಗುರುತಿಸಲು ಅವಕಾಶ ಇದೆ. ಈ ಗುಂಡಿಗಳ ಆಳ, ಉದ್ದ ಗುರುತಿಸಿ ಗುಂಡಿ ಮುಚ್ಚುವ ಕಾರ್ಯ ನಡೆದ ಮೇಲೆ ಸಾಕ್ಷಿ ಸಮೇತ ಮಾಹಿತಿ ನೀಡಿದರೆ ಮಾತ್ರ ಹಣ ಬಿಡುಗಡೆಯ ಲೆಕ್ಕಚಾರ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: Training To Be Organised – ಪಿಎಫ್‌ಐ ಪತ್ರ, ಪೊಲೀಸ್ ತನಿಖೆ ಚುರುಕು
Advertisement
ನಗರದ ಬಹುತೇಕ ರಸ್ತೆಗಳಲ್ಲಿ ಈ ಗುಂಡಿಯದೇ ದೊಡ್ಡ ಗೋಲ್ ಮಾಲ್. ಯಾವುದೋ ರಸ್ತೆ ತೋರಿಸಿದರು ಪಾಲಿಕೆ ಮುಚ್ಚಿದ್ದೀವಿ ಅಂತಾರೆ. ಆದ್ರೆ ಸಿಟಿ ಮಧ್ಯಭಾಗದಲ್ಲೇ ಹಲವೆಡೆ ಮುಚ್ಚಿಲ್ಲ. ಇದೆಲ್ಲ ಸುಮ್ಮನೆ ಕಾಲಕಳೆಯುವ ಐಡಿಯಾ ಎಂದು ಆ್ಯಪ್ ಲೆಕ್ಕಾಚಾರದ ಕುರಿತಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.