– ಮುಂದಿನ 25 ವರ್ಷ ಗುರಿಯಾಗಿಸಿ ಪಾಲಿಕೆ ಪ್ಲ್ಯಾನ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಟ್ರಾಫಿಕ್‌ನಿಂದ (Traffic) ಮುಕ್ತಿ ಯಾವಾಗಪ್ಪ ಅಂತ ದೇವರತ್ತ ಮುಖ ಮಾಡುವ ಸ್ಥಿತಿ ವಾಹನ ಸವಾರರದ್ದು. ಇತ್ತ ಬೆಂಗಳೂರಿನ ಅಭಿವೃದ್ಧಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ದೇವರೇ ಧರೆಗೆ ಇಳಿದು ಬಂದ್ರೂ ಮುಂದಿನ ಮೂರು ವರ್ಷದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸೋಕೆ ಆಗಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿ (BBMP) ಈ ವರ್ಷ ಟ್ರಾಫಿಕ್ ಸಮಸ್ಯೆ ನಿವಾರಣೆಗೆ 10,000 ಕೋಟಿ ರೂ. ಖರ್ಚು ಮಾಡಲು ಮುಂದಾಗಿದೆ.
ಮುಂದಿನ 25 ವರ್ಷದವರೆಗೂ ರಸ್ತೆಗಳ ಸಮಸ್ಯೆ ಉದ್ಭವವಾಗದಂತೆ ಬಿಬಿಎಂಪಿ ಹಲವು ಯೋಜನೆ ರೂಪಿಸಿದೆ. 80 ರಿಂದ 90 ಕಿಲೋಮೀಟರ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಪ್ಲ್ಯಾನ್ ಹಾಕಿಕೊಂಡಿದೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ – 9,000 ನರ್ಸ್‌ಗಳಿಂದ ಅಹೋರಾತ್ರಿ ಧರಣಿ
ಬೆಂಗಳೂರಿನಲ್ಲಿ ಇರುವ ಎಲ್ಲಾ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ಮಾಡೋದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಈ ವರ್ಷ ಒಂದೆರಡು ಫ್ಲೈ ಓವರ್‌ಗೆ ಚಾಲನೆ ನೀಡೋದಲ್ಲದೇ ಟನಲ್‌ಗೂ ಚಾಲನೆ ಕೊಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಪಕ್ಷಿಗಳ ನಿಗೂಢ ಸಾವು – ಹಕ್ಕಿ ಜ್ವರದ ಶಂಕೆ