ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಅಂತಾ ಮಂತ್ರಿಮಾಲ್‍ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೀಗ ಹಾಕಿತ್ತು. ಬರೋಬ್ಬರಿ 50 ಕೋಟಿ ಬಾಕಿ ಇದೆ ಅಂತಾ ಚಟುವಟಿಕೆಗೆ ಬ್ರೇಕ್ ಹಾಕಿತ್ತು. ಈಗ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಬೇರೆ ಮಾಲ್‍ಗಳ ವಿರುದ್ಧವೂ ಸಮರ ಸಾರಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
Advertisement
ಖುದ್ದಾಗಿ ಮಾಲ್ ಗಳಿಗೆ ಭೇಟಿ ನೀಡಿ ಆಸ್ತಿ ತೆರಿಗೆ ವಸೂಲಿಗೆ ನೋಟಿಸ್ ನೀಡಲಿದೆಯಂತೆ. ಒಂದು ವೇಳೆ ನೋಟಿಸ್‍ಗೆ ಉತ್ತರ ಕೊಡದಿದ್ದರೆ ಚರಾಸ್ತಿ ವಶಪಡಿಸಿಕೊಳ್ಳುತ್ತೇವೆ. ಇಲ್ಲದೇ ಇದ್ದರೆ ಬೀಗ ಹಾಕುವುದಾಗಿ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮಾಲ್ ಅಷ್ಟೇ ಅಲ್ಲ ಯಾರ್ಯಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆಯೋ ಅವರ ತೆರಿಗೆಯನ್ನೂ ವಸೂಲಿ ಮಾಡುತ್ತೇವೆ ಅಂತಿದ್ದಾರೆ. ನೂರಾರೂ ಕೋಟಿ ಮಾಲ್ ಗಳಿಂದ ಆಸ್ತಿ ತೆರಿಗೆ ವಸೂಲಿ ಆಗಬೇಕಿದೆ. ಕೆಲ ಮಾಲ್ ಗಳು ಬಿಬಿಎಂಪಿ ಬೀಗ ಹಾಕುತ್ತೆ ಅಂತಾ ಕೋರ್ಟಿಗೆ ಹೋಗಿ ಸ್ಟೇ ತರುತ್ತಾ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಈ ವರ್ಷ ಎರಡೂವರೆ ಸಾವಿರ ಕೋಟಿ ಆಸ್ತಿತೆರಿಗೆ ವಸೂಲಿ ಮಾಡುವ ಗುರಿಯನ್ನ ಬಿಬಿಎಂಪಿ ಹೊಂದಿದೆ. ಅದರ ಭಾಗವಾಗಿ ಬರೋಬ್ಬರಿ 50 ಸಾವಿರ ನೋಟಿಸ್ ಗಳನ್ನ ನೇರವಾಗಿ ಮನೆಗಳಿಗೆ ತೆರಳಿ ಬಿಬಿಎಂಪಿ ನೀಡುತ್ತಿದೆ. ಇದರ ಜೊತೆಗೆ ಎಸ್ ಎಂಎಸ್ ಮೂಲಕ ಬರೋಬ್ಬರಿ 6 ಲಕ್ಷ ಜನರಿಗೆ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆಯಂತೆ. ಯಾರನ್ನು ಬಿಡಲ್ಲ ವಸೂಲಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ- ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮ