ಬೆಂಗಳೂರು: ಲಕ್ಷಗಟ್ಟಲೆ ಡೊನೇಷನ್ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಗ್ ಶಾಕ್ ನೀಡಲು ಬಿಬಿಎಂಪಿ ಮುಂದಾಗಿದೆ.
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಕಾಯ್ದೆ 110 ಜಿ ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ಮತ್ತಿತರ ಸವಲತ್ತುಗಳ ವಿನಾಯ್ತಿ ಪಡೆದಿದ್ದರೂ ಲಕ್ಷಾಂತರ ಡೊನೇಷನ್ ಪಡೆಯುತ್ತಿವೆ. ಇಂತಹ ಸುಮಾರು 3,000ಕ್ಕೂ ಅಧಿಕ ಶಾಲಾಕಾಲೇಜುಗಳ ಮಾಹಿತಿ ಬಿಬಿಎಂಪಿ ಸಂಗ್ರಹಿಸಿದೆ. ಅಧಿಕ ಡೊನೇಷನ್ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಲು ಪಾಲಿಕೆ ಅಧಿಕಾರಿಗಳು ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
Advertisement
Advertisement
ಮೇಯರ್ ಗೌತಮ್‍ಕುಮಾರ್ ಜೈನ್ ಶಿಕ್ಷಣ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸುವ ಪ್ರಸ್ತಾವನೆಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರ ಮುಂದೆ ಸಲ್ಲಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಸರ್ಕಾರ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದರೆ ಬಿಬಿಎಂಪಿ ಖಜಾನೆಗೆ 50ರಿಂದ 80 ಕೋಟಿ ರೂ. ಆದಾಯ ಹರಿದುಬರಲಿದೆ ಎಂದು ನಿರೀಕ್ಷಿಸಲಾಗಿದೆ.
Advertisement
ಖಾಸಗಿ ವಿದ್ಯಾಸಂಸ್ಥೆಗಳು ಬಿಬಿಎಂಪಿ, ಸರ್ಕಾರದಿಂದ ತೆರಿಗೆ ವಿನಾಯ್ತಿ ಹಾಗೂ ಸವಲತ್ತುಗಳನ್ನು ಪಡೆದು ವಿದ್ಯಾರ್ಥಿಗಳಿಂದ ಡೊನೇಶನ್ ಪೀಕುತ್ತಿವೆ. ಹೀಗಾಗಿ ಇಂತಹ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿಧಿಸುವುದು ಸೂಕ್ತ ಎಂಬುದು ಬಿಬಿಎಂಪಿಯ ಲೆಕ್ಕಾಚಾರವಾಗಿದೆ.