ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬುಧವಾರ ರಾತ್ರಿ ಬೀದಿ ದೀಪ ಉರಿಯುವುದು ಅನುಮಾನ.
ಬಿಬಿಎಂಪಿ ವಿರುದ್ದ ಮುನಿಸಿಕೊಂಡಿರುವ ಬೀದಿ ದೀಪ ನಿರ್ವಹಣೆಯ ಗುತ್ತಿಗೆದಾರರು ಪ್ರತಿಭಟನೆಗೆ ಇಳಿದಿದ್ದಾರೆ. ಹೀಗಾಗಿ ಬುಧವಾರ ನಗರದ ದೀಪಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲು ವಿದ್ಯುತ್ ಗುತ್ತಿಗೆದಾರರ ಸಂಘ ನಿರ್ಧರಿಸಿದೆ.
Advertisement
2016 ರಿಂದ ಒಟ್ಟು 40 ಕೋಟಿ ರೂ. ಹಣವನ್ನು ಬಿಬಿಎಂಪಿ ಬೀದಿದೀಪ ನಿರ್ವಹಣೆಗಾರರಿಗೆ ನೀಡಬೇಕಿತ್ತು. ಆದರೆ ಇಲ್ಲಿಯವರೆಗೆ ಈ ಹಣವನ್ನು ಪಾವತಿ ಮಾಡದ ಕಾರಣ ಇಂದು ರಾತ್ರಿಯಿಂದಲೇ 4 ಲಕ್ಷ ಬೀದಿ ದೀಪಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಗುತ್ತಿಗೆದಾರರು ನಿರ್ಧರಿಸಿದ್ದಾರೆ.
Advertisement
ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ವಾಹನಗಳೊಂದಿಗೆ ಗುತ್ತಿಗೆದಾರರು ಜಮಾಯಿಸಿದ್ದು, ಬಿಬಿಎಂಪಿ ಹಣವನ್ನು ಪಾವತಿ ಮಾಡುವ ಬಗ್ಗೆ ಭರವಸೆ ನೀಡಿದರೆ ಬುಧವಾರ ಬೆಂಗಳೂರು ನಗರದಲ್ಲಿ ಬೀದಿದೀಪ ಉರಿಯಲಿದೆ.