ಬೆಂಗಳೂರು: ಬಿಬಿಎಂಪಿ (BBMP) ಆಪರೇಷನ್ ರಾಜಕಾಲುವೆ (Rajakaluve) ಕಾರ್ಯಾಚರಣೆ ನಡೆಸುತ್ತಿದ್ದು, ಇಂದಿನಿಂದ ರಾಜಧಾನಿಯಲ್ಲಿ ಮತ್ತೆ ಜೆಸಿಬಿಗಳು ಘರ್ಜಿಸುತ್ತಿವೆ. 15 ದಿನದಲ್ಲಿ 100 ತೆರವಿಗೆ ಟಾರ್ಗೆಟ್ ಹಾಕಿಕೊಳ್ಳಲಾಗಿದೆ. ಮಳೆ ಆರಂಭಕ್ಕೂ ಮುನ್ನ ಒತ್ತುವರಿ ತೆರವು ಮಾಡಲು ಗುರಿ ಹಾಕಿಕೊಂಡಿರುವ ಬಿಬಿಎಂಪಿ ಮಹಾದೇವಪುರ ವಲಯದ ದೊಡ್ಡನಕ್ಕುಂದಿ ಮತ್ತು ಪಣತ್ತೂರಿನಲ್ಲಿ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದೆ. ದೊಡ್ಡನಕ್ಕುಂದಿಯಲ್ಲಿ ಸುಮಾರು 8 ರಿಂದ 10 ಬಿಲ್ಡಿಂಗ್ ಗಳನ್ನ ಮಾರ್ಕ್ ಮಾಡಲಾಗಿದೆ.
Advertisement
ಮಹಾದೇವಪುರ ವಲಯ ಪಣತ್ತೂರು ಹಾಗೂ ದೊಡ್ಡಾನಕ್ಕುಂದಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದೆ. ಒಟ್ಟು 571 ಕಡೆ ತೆರವು ಮಾಡಬೇಕಿರುವುದಾಗಿ ಬಿಬಿಎಂಪಿ ಮಾಹಿತಿ ಸಂಗ್ರಹಿಸಿದೆ. ಬಾಗ್ಮನೆ ಬಳಿಯಿಂದ ಒತ್ತುವರಿ ಆರಂಭವಾಗಿ ದೊಡ್ಡನಕ್ಕುಂದಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ.
Advertisement
ರಾಜಕಾಲುವೆ ಒತ್ತುವರಿ ತೆರವಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ದೊಡ್ಡನಕ್ಕುಂದಿಯ ಫರ್ನ್ಸ್ ಸಿಟಿ ಬಡಾವಣೆಯಲ್ಲಿ 15 ಕಡೆ ಮಾರ್ಕ್ ಮಾಡಿದ್ದು, ಸ್ಥಳೀಯ ನಿವಾಸಿಗಳು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೊಡ್ಡವರ ಬಿಲ್ಡಿಂಗ್ ಹೊಡೆಯೋದು ಬಿಟ್ಟು ಚಿಕ್ಕವರ ಬಿಲ್ಡಿಂಗ್ ಹೊಡೆಯುತ್ತಾ ಇದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ- ವಿಜಯೇಂದ್ರ ಹೀಗಂದಿದ್ಯಾಕೆ..?
Advertisement
Advertisement
ಮಹಿಳೆಯ ಹೈಡ್ರಾಮಾ:
ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಮಹಿಳೆಯೊಬ್ಬರು ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ. ತೆರವು ಮಾಡೋಕೆ ಬಿಡಲ್ಲ ಅಂತೆ ಜೆಸಿಬಿಗೆ ಅಡ್ಡಲಾಗಿ ನಿಂತಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರನಾ? ಅಂತಾ ಕೂಡಾಗಿ ತೆರವಿಗೆ ವಿರೋಧ ಮಾಡಿದ್ದಾರೆ. ಈ ವೇಳೆ ಮನೆಯನ್ನ ಪೊಲೀಸರು (Bengaluru Police) ವಶಕ್ಕೆ ಪಡೆದಿದ್ದಾರೆ. ಬಳಿಕ 15 ಮೀಟರ್ ಒತ್ತುವರಿ ಮಾಡಿಕೊಂಡಿರೋ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: 80 ಅಡಿಗೆ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ – ಕುಡಿಯುವ ನೀರಿಗೆ ಶುರುವಾಗಿದೆ ಆತಂಕ
ಮಾಜಿ ಶಾಸಕರಿಂದ ವಿರೋಧ:
ಇನ್ನೂ ತೆರವು ಕಾರ್ಯಾಚರಣೆಗೆ ಮಾಜಿ ಶಾಸಕ ನಂದೀಶ್ ರೆಡ್ಡಿ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಮಧ್ಯೆ ನಿಂತು ತೆರವು ಕಾರ್ಯಾಚರಣೆ ಮಾಡೋದಕ್ಕೆ ನಾನು ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು. ಮಹಾದೇವಪುರದಲ್ಲಿ ಬಿಜೆಪಿಗೆ ಹೆಚ್ಚು ಲೀಡ್ ಬಂದಿದೆ ಅಂತಾ ಮಹಾದೇವಪುರ ತೆರವು ಮಾಡ್ತಾ ಇದಾರೆ ಅಂತಾ ಬಾಂಬ್ ಸಿಡಿಸಿದ್ದಾರೆ.
ಮಾಜಿ ಶಾಸಕನ ದರ್ಪ:
ದೊಡ್ಡನಕ್ಕುಂದಿ ಕೆರೆ ಬಳಿಯಿಂದ ತೆರವು ಮಾಡಿ, ಮಧ್ಯದಲ್ಲಿ ಯಾಕೆ ತೆರವು ಮಾಡ್ತಿದ್ದೀರಾ? ಇದರಿಂದ ಇಲ್ಲಿ ಪ್ರವಾಹ ಆಗುತ್ತೆ, ಇಲ್ಲಿ ಬಿಜೆಪಿಗೆ ಲೀಡ್ ಬಂದಿದೆ ಎಂದು ಇಲ್ಲಿ ಒಡೆಯುತ್ತಿದ್ದೀರಾ? ರಾಜಕೀಯ ಇದ್ರೂ ಇರಬಹುದು? ನಾವ್ಯಾರೂ ರಾಜಕಾಲುವೆ ಒತ್ತುವರಿ ತೆರವಿನ ವಿರೋಧಿಗಳಲ್ಲ. ನನ್ನದು ಜಾಗ ಇಲ್ಲಿಲ್ಲ, ಇದ್ದರೂ ತೆರವು ಮಾಡಿ, ಆದ್ರೆ ನ್ಯಾಯಯುತವಾಗಿ ತೆರವು ಮಾಡಿ ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಏರು ಧ್ವನಿಯಲ್ಲಿ ಪೊಲೀಸರಿಗೇ ಅವಾಜ್ ಹಾಕಿದ್ದಾರೆ. ಜೊತೆಗೆ ಜೆಸಿಬಿ ಮೇಲೆ ಹತ್ತಿ ಕೀ ಕಿತ್ತುಕೊಂಡು ದರ್ಪ ಮೆರೆದಿದ್ದಾರೆ.
ಒತ್ತುವರಿ ತೆರವಿಗೆ ಟ್ವಿಸ್ಟ್:
ಮತ್ತೊಂದು ಕಡೆ ಫರ್ನ್ಸ್ ಸಿಟಿ ರಾಜಕಾಲುವೆ ಒತ್ತುವರಿ ತೆರವಿಗೆ ಮೆಗಾ ಟ್ವಿಸ್ಟ್ ಕೊಟ್ಟಂತಾಗಿದೆ. ಒತ್ತುವರಿ ತಡೆಯಾಜ್ಞೆಗೆ ಹೈಕೋರ್ಟ್ ನಲ್ಲಿ ನಿವಾಸಿಗಳಿಂದ ಅರ್ಜಿ ಸಲ್ಲಿಸಲಾಗಿದೆ. ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ. ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಇರೋವಾಗ ಕಾರ್ಯಾಚರಣೆ ನಡೆಸೋ ಹಾಗಿಲ್ಲ ಎಂದು ಒತ್ತುವರಿದಾರರ ಪರ ವಕೀಲೆ ಅಮೃತ ಹೇಳಿದ್ದಾರೆ.